ಎಲ್ಲದಕ್ಕೂ ಕಾಲ ಬರುತ್ತೆ ಆಗ ಉತ್ತರುಸುವೆ- ಸರ್ಕಾರದ ವಿರುದ್ಧ ಡಿ.ಕೆ ಶಿವಕುಮಾರ್ ವಾಗ್ದಾಳಿ. ಬೆಂಗಳೂರು,ಜನವರಿ,15,2022(..):ಕಾಂಗ್ರೆಸ್ ನ ಮೇಕೆದಾಟು ಯೋಜನೆ ಪಾದಯಾತ್ರೆ ಈಗಾಗಲೇ ಅರ್ಧಕ್ಕೆ ಮೊಟಕುಗೊಂಡಿದ್ದು ಈ ಸಂಬಂಧ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು, ನಾವು ಮತ್ತೆ ಪಾದಯಾತ್ರೆ ಮಾಡೇ ಮಾಡುತ್ತೇವೆ ಪಾದಯಾತ್ರೆ ವೇಳೆ ನೋಟೀಸ್ ವಿಚಾರ ಸಂಬಂಧ ಎಷ್ಟು ಸಾಧ್ಯವೋ ಅಷ್ಟೂ ಕೇಸ್ ಹಾಕಿದ್ದಾರೆ. ನಾನು ಎಲ್ಲವನ್ನೂ ಎದುರಿಸುತ್ತೀನಿ. ಬಿಜೆಪಿ ಎಷ್ಟು ಕಾರ್ಯಕ್ರಮ ಮಾಡಿದೆ ಮಾರ್ಗಸೂಚಿ ಫಾಲೋ ಮಾಡಿದೆಯಾ. ರಾಮನಗರದಲ್ಲಿ ಕಾರ್ಯಕ್ರಮ ನಡೆಸಿತು. ಜನಾಶೀರ್ವಾದ ಯಾತ್ರೆ ಮಾಡಿದರು ಇಲ್ಲೆಲ್ಲಾ ಬಿಜೆಪಿ ಮಾರ್ಗಸೂಚಿ ಫಾಲೋ ಮಾಡಿದೆಯಾ..? ಎಲ್ಲದಕ್ಕೂ ಕಾಲ ಬರುತ್ತೆ ಆಗ ಉತ್ತರಿಸುವೆ ಎಂದು ಕಿಡಿ ಕಾರಿದರು. ಮೇಕೆದಾಟು ಅಣೆಕಟ್ಟೆಗೆ ಮೇಧಾ ಪಾಟ್ಕರ್ ಅವರ ವಿರೋಧ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿ.ಕೆಶಿ, ಅವರ ಹೇಳಿಕೆ ವೈಯಕ್ತಿಕ ಅಭಿಪ್ರಾಯ. ಈ ಬಗ್ಗೆ ಮಾತನಾಡಲ್ಲ ಎಂದರು. : - – -.