ಕೋವಿಡ್ ಸಮಯದಲ್ಲಿ ಯಾವುದೇ ರ್ಯಾಲಿ ಸಭೆ, ಸಮಾರಂಭಗಳಿಗೆ ಅವಕಾಶ ಕೊಡಬೇಡಿ-ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ. ಬೆಂಗಳೂರು,ಜನವರಿ,14,2022(..):ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಪಿಐಎಲ್ ಇತ್ಯರ್ಥಪಡಿಸಿದ ರಾಜ್ಯ ಹೈಕೋರ್ಟ್, ಕೋವಿಡ್ ಸಮಯದಲ್ಲಿ ಯಾವುದೇ ರ್ಯಾಲಿ ಸಭೆ,ಸಮಾರಂಭಗಳಿಗೆ ಅವಕಾಶ ಕೊಡಬೇಡಿ ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಪ್ರಶ್ನಿಸಿ ಪಾದಯಾತ್ರೆ ಸ್ಥಗಿತಗೊಳಿಸಲು ಮನವಿ ಮಾಡಿ ಹೈಕೋರ್ಟ್ ಗೆ ಪಿಐಎಲ್ ಸಲ್ಲಿಕೆಯಾಗಿತ್ತು. ಈ ಮಧ್ಯೆ ಪಾದಯಾತ್ರೆ ತಡೆಯಲು ಸರ್ಕಾರದ ಕ್ರಮಗಳೇನು ಎಂದು ಪ್ರಶ್ನಿಸಿದ್ಧ ಹೈಕೋರ್ಟ್ ಉತ್ತರಿಸಲು ಸರ್ಕಾರಕ್ಕೆ ಒಂದು ದಿನ ಕಾಲಾವಕಾಶ ನೀಡಿತ್ತು. ಇದೀಗ ಕಾಂಗ್ರೆಸ್ ಪಾದಯಾತ್ರೆ ಸ್ಥಗಿತಗೊಳಿಸಿರುವ ಬಗ್ಗೆ ಹೈಕೋರ್ಟ್ ಗೆ ಕಾಂಗ್ರೆಸ್ ಪರ ವಕೀಲರು ವರದಿ ಸಲ್ಲಿಸಿದ್ದಾರೆ. ಕಾಂಗ್ರೆಸ್ ಪರ ಹಿರಿಯ ವಕೀಲ ಉದಯ್ ಹೊಳ್ಳ ವಾದ ಮಂಡಿಸಿ, ಕಾಂಗ್ರೆಸ್ ಪಾದಯಾತ್ರೆ ಮುಂದೂಡಲಾಗಿದೆ ಆದರೆ ಬೇರೆ ಪಕ್ಷಗಳ ಕಾರ್ಯಕ್ರಮಗಳು ನಡೆಯುತ್ತಿವೆ. ಸರ್ಕಾರದ ತಾರತಮ್ಯ ನೀತಿ ಪರಿಗಣಿಸಲು ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ಪಿಐಎಲ್ ಇತ್ಯರ್ಥಗೊಳಿಸಿದ ಹೈಕೋರ್ಟ್. ರಾಜಕೀಯ ಕಾರ್ಯಕ್ರಮಕ್ಕೆ ಅವಕಾಶ ನೀಡಬೇಡಿ ಜ.4 ರ ಗೈಡ್ ಲೈನ್ಸ್ ಕಟ್ಟು ನಿಟ್ಟಾಗಿ ಜಾರಿ ಮಾಡಿ. ಕೊರೋನಾ ಸಮಯದಲ್ಲಿ ಯಾವುದೇ ರ್ಯಾಲಿ ಧರಣಿಗೆ ಅವಕಾಶ ಕೊಡಬೇಡಿ ಎಂದು ಸರ್ಕಾರಕ್ಕೆ ಸೂಚನೆ ನೀಡಿದೆ. : - - – . … . , , 14, 2022 (..): ’ , , . . ’ ’ ., . ’ . , 4 . .: / / / /