ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಮಾಡಿದ್ದು ತಪ್ಪು- ಗೃಹ ಸಚಿವ ಅರಗ ಜ್ಞಾನೇಂದ್ರ. ಬೆಂಗಳೂರು,ಜನವರಿ,14,2022(..):ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಮಾಡಿದ್ದು ತಪ್ಪು. ರಾಜಕೀಯ ಲಾಭ ಪಡೆಯಲು ಪಾದಯಾತ್ರೆ ಹೊರಟಿದ್ದರು. ಆದ್ರೆ ಅದು ಅವರ ಪಕ್ಷಕ್ಕೆ ನಷ್ಟವೇ ಆಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಕಿಡಿಕಾರಿದರು. ಮಾಧ್ಯಮಗಳ ಜತೆ ಇಂದು ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಕಾಂಗ್ರೆಸ್ ನವರು ರಾಜಕೀಯ ಲಾಭ ಪಡೆಯಲು ಪಾದಯಾತ್ರೆ ಹೊರಟಿದ್ದರು . ಕಾಂಗ್ರೆಸ್ ವೈಪಲ್ಯ ಮುಚ್ಚಿಕೊಳ್ಳಲು ಆರೋಪಿಸಿದ್ದಾರೆ. ಮೇಕೆದಾಟು ಯೋಜನೆಗೆ ಯಾವ ಪಕ್ಷದ ವಿರೋಧ ಇಲ್ಲ. ಆದ್ರೂ ಕಾಂಗ್ರೆಸ್ ಸುಮ್ಮನೇ ಹೋರಾಟ ಮಾಡುತ್ತಿದೆ. ಕಾನೂನು ಎಲ್ಲರಿಗ ಹೊಂದೆ ಎಂದು ಹೇಳಿದರು. ರಾಜ್ಯದಲ್ಲಿ ಕೊರೋನಾ ಹೆಚ್ಚಳ ಕುರಿತು ಮಾತನಾಡಿದ ಅರಗ ಜ್ಞಾನೇಂದ್ರ, ಪ್ರಾಣ ಆರೋಗ್ಯ ಎರಡು ನಮ್ಮ ಕೈಯಲ್ಲಿ ಇದೆ. ನಮ್ಮ ಹೊಣೆಗಾರಿಕೆ ಅರ್ಥ ಮಾಡಿಕೊಂಡು ಬದುಕಬೇಕು ಎಂದು ನುಡಿದರು. : –- – - .