ಕೋವಿಡ್ ಮಾರ್ಗಸೂಚಿ ತಿಂಗಳಾಂತ್ಯದವರೆಗೂ ಮುಂದುವರಿಕೆ- ಸಚಿವ ಡಾ.ಕೆ.ಸುಧಾಕರ್. ಬೆಂಗಳೂರು,ಜನವರಿ14,2022(..):ರಾಜ್ಯದಲ್ಲಿ ಹಲವೆಡೆ ಕೊರೋನಾ ಸೋಂಕು ಹೆಚ್ಚುತ್ತಿದೆ. ಕೋವಿಡ್ ಮಾರ್ಗಸೂಚಿ ತಿಂಗಳಾಂತ್ಯದವರೆಗೂ ಮುಂದುವರೆಯಲಿದೆ ಎಂದು ಆರೋಗ್ಯ ಸಚಿವ ಡಾ.ಕೆ,ಸುಧಾಕರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಇಂದು ಮಾದ್ಯಮಹಳ ಜತೆ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ರಾಜ್ಯದಲ್ಲಿ ಕಟ್ಟುನಿಟ್ಟಿನ ಕೋವಿಡ್ ರೂಲ್ಸ್ ಮುಂದುವರೆಯಲಿದೆ. ಈ ಬಗ್ಗೆ ಸಿಎಂ ಬೊಮ್ಮಾಯಿ ಅವರೇ ಹೇಳಿದ್ದಾರೆ. ಕೊರೋನಾ ಕಂಟ್ರೋಲ್ ಗೆ ಜನರ ಸಹಕಾರ ಅಗತ್ಯ. ಹಲವೇಡೆ ಸೋಂಕು ಹೆಚ್ಚಾಗುತ್ತಿದೆ. ಲಕ್ಷಣ ಇಲ್ಲವೆಂದು ಯಾರೂ ನಿರ್ಲಕ್ಷಿಸಬೇಡಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಬೂಸ್ಟರ್ ಡೋಸ್ ಪಡೆಯಲು ಅರ್ಹರಿರುವವರು ಪಡೆಯಿರಿ. 2ನೇ ಡೋಸ್ ಪಡೆಯದವರು ಆದಷ್ಟು ಬೇಗ ಪಡೆಯಿರಿ. ಅನಗತ್ಯವಾಗಿ ಜನಸಂದಣಿ ಜನ ಸೇರೋದು ಬೇಡ. ಮಾಸ್ಕ್ ಧರಿಸಿ ದೈಹಿಕ ಅಂತರ ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು. ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಮುಂದುವರೆಯುತ್ತೆ. ಲಾಕ್ ಡೌನ್ ಮೂಲಕ ಕೊರೋನಾ ನಿಯಂತ್ರಿಸುವುದು ಸರಿಯಲ್ಲ ಜನರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಿ. ಅನಗತ್ಯವಾಗಿ ಸಭೆ ಸಮಾರಂಭ ಬೇಡ. ಸಿಎಂಗಳ ಜತೆಗಿನ ಸಭೆಯಲ್ಲಿ ಪ್ರಧಾನಿ ಮೋದಿ ಇದನ್ನೇ ಹೇಳಿದ್ದಾರೆ. ಕೇಸ್ ಹೆಚ್ಚಿರೋ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಸುಧಾಕರ್ ತಿಳಿಸಿದರು. : - - - -. . … - . . , 14, 2022 (..): “ -19 , -,” . . . , . “ . , , . . . ’ . ’ 2nd , . ,” . . . . “, ,” .: . . / / / /