ಭವಿಷ್ಯದಲ್ಲಿ ಮಹಿಳೆಯರ ಆರೋಗ್ಯದ ಡಿಜಿಟಲೀಕರಣಕ್ಕೆ ಹೆಜ್ಜೆ ಡಾ. ಹೇಮಾದಿವಾಕರ್ ನೇತೃತ್ವದ ಬೆಂಗಳೂರಿನ ತರಬೇತಿ ಮತ್ತು ಕೌಶಲ್ಯ ವರ್ಗಾವಣೆ ಸಂಸ್ಥೆ, ಡಿಜಿಟಲ್ ಫ್ಲಾಟ್ ಫಾರ್ಮ್ ನ ಪ್ರಾಮುಖ್ಯತೆಯನ್ನು ಗುರುತಿಸಿ ಕಾರ್ಯಗತಗೊಳಿಸಲು ಮುಂದಾಗಿದೆ ಬೆಂಗಳೂರು :ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಜಗತ್ತು ಹೆಚ್ಚು ಡಿಜಿಟಲೀಕರಣದತ್ತ ಸಾಗುತ್ತಿರುವಾಗ, ಬೆಂಗಳೂರು ಮೂಲದ ಆರ್ಟಿಸ್ಟ್ ಫಾರ್ ಹರ್( ) (ಏಷ್ಯನ್ ರಿಸರ್ಚ್ ಅಂಡ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಫಾರ್ ಸ್ಕಿಲ್ ಟ್ರಾಸ್ಫರ್ ಸಂಸ್ಥೆಯ ಸಿಇಒ, ಆರೋಗ್ಯ ಕ್ಷೇತ್ರದ ಮುಂಚೂಣಿ ನಾಯಕಿ ಡಾ.ಹೇಮಾದಿವಾಕರ್ ನೇತೃತ್ವದಲ್ಲಿ ಮತ್ತೊಂದು ಕ್ರಾಂತಿಕಾರಕ ಯೋಜನೆ ರೂಪಿಸಲಾಗಿದೆ. ಕರೋನಾ ವೈರಸ್ ಮಾನವೀಯತೆಯನ್ನೇ ಕೊಲ್ಲುವ ಮೊದಲು ಆರೋಗ್ಯ ಕ್ಷೇತ್ರದ ಕಾರ್ಯಕರ್ತರು ಮತ್ತು ತರಬೇತಿದಾರರಿಗೆ ಕೌಶಲ್ಯ ಜ್ಞಾನವನ್ನು ಹೆಚ್ಚಿಸಲು ಡಿಜಿಟಲ್ ಮಾರ್ಗವನ್ನು ಸದ್ಭಳಕೆ ಮಾಡಿಕೊಳ್ಳಲು ಮುಂದಾಗಿದೆ. ಭಾರತದಂತಹ ವಿಶಾಲ ದೇಶದಲ್ಲಿ ಆರೋಗ್ಯಕ್ಷೇತ್ರ ಎದುರಿಸುತ್ತಿರುವ ಸವಾಲುಗಳನ್ನು ಪರಿಗಣಿಸಿ, ಐದುವರ್ಷಗಳ ಹಿಂದೆಯೇ ಡಾ. ಹೇಮಾದಿವಾಕರ್ ಅವರು ದೂರಶಿಕ್ಷಣ ಮತ್ತು ತರಬೇತಿ ವಿಧಾನಗಳ ಮೂಲಕ ಅಗತ್ಯ ಕೌಶಲ್ಯ ಮತ್ತು ತರಬೇತಿಯನ್ನು ನೀಡುವ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಡಿಜಿಟಲೀಕರಣದ ಪಾತ್ರವನ್ನು ಯೋಜಿಸಿದ್ದರು. ತಾಯಿ ಮತ್ತು ಮಗುವಿನ ಆರೋಗ್ಯಕ್ಷೇತ್ರಗಳಲ್ಲಿ ಆರೋಗ್ಯ ಕಾರ್ಯಕರ್ತರ ಸಾಮರ್ಥ್ಯ ಬಲಪಡಿಸುವಲ್ಲಿ ಇದು ಅತ್ಯಂತ ಪರಿಣಾಮಕಾರಿಯಾಗಿದೆ. ದೇಶದ ದೂರದ ಮತ್ತು ದುರ್ಗಮ ಭಾಗಗಳಲ್ಲಿ ಶಿಶುಗಳ ಮರಣವನ್ನು ತಡೆಗಟ್ಟಲು ಮತ್ತು ಡಿಜಿಟಲ್ ಕೌಶಲ್ಯಗಳು, ಜ್ಞಾನವರ್ಗಾವಣೆ ಮತ್ತು ತರಬೇತಿಯ ಮೂಲಕ ಮಹಿಳೆಯರ ಆರೋಗ್ಯವು ರಾಷ್ಟ್ರದ ಸಂಪತ್ತು ಎಂದು ಸಾರಲು ಆರ್ಟಿಸ್ಟ್ ಮುಂದಾಯಿತು. ಇಂದು ಡಿಜಿಟಲೀಕರಣವು ಆರೋಗ್ಯ ಕ್ಷೇತ್ರವನ್ನು ಸಂಪೂರ್ಣವಾಗಿ ಆವರಿಸಿದೆ. “ಸಾಂಕ್ರಾಮಿಕ ರೋಗದಿಂದಾಗಿ ಉಂಟಾಗುವ ಅಡೆತಡೆ ನಿವಾರಿಸಲು ಡಿಜಿಟಲೀಕರಣ ಇಂದು ಅನಿವಾರ್ಯವಾಗಿದೆ. ನಾವು ಇದರಲ್ಲಿ ಈಗಾಗಲೆ ಸಾಕಷ್ಟು ಮುಂದೆ ಸಾಗಿದ್ದರಿಂದ ಹೆಮ್ಮೆಪಡುತ್ತೇವೆ. ಆರ್ಟಿಸ್ಟ್ ಅದ್ಭುತವಾದ, ವಿಶ್ವಾಸಾರ್ಹ ಮತ್ತು ಸಾಬೀತಾಗಿರುವ ಡಿಜಿಟಲ್ ಕೌಶಲ್ಯ ವರ್ಗಾವಣೆ ವೇದಿಕೆಯನ್ನು ನಿರ್ಮಿಸಿದೆ. ಇದು ಆರೋಗ್ಯ ಕಾರ್ಯಕರ್ತರಿಗೆ ಅವರ ಜೊತೆಗಿರುವವರಿಗೆ ಸಾಕಷ್ಟು ಪ್ರಯೋಜನವನ್ನು ನೀಡುತ್ತದೆ”ಎಂದು ಆರ್ಟಿಸ್ಟ್ ಫಾರ್ ಹರ್ ಸಿ ಇಒ ಡಾ. ಹೇಮಾದಿವಾಕರ್ ಹೇಳುತ್ತಾರೆ. ಡಿಜಿಟಲ್ ಕೌಶಲ್ಯವರ್ಗಾವಣೆಯು ಇಂದು ಆರ್ಟಿಸ್ಟ್ ಫಾರ್ ಹರ್ ಮೂಲಾಧಾರಗಳಲ್ಲಿ ಒಂದಾಗಿದೆ. ಇದು ಹಲವಾರು ಪ್ರಾದೇಶಿಕ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಮ್ಮೇಳನಗಳು, ತರಬೇತಿ ಮಾಡ್ಯೂಲ್‌ಗಳು, ವಿಚಾರಸಂಕಿರಣಗಳು, ಸಮಾಲೋಚನೆಗಳು ಮತ್ತು ವರ್ಚುವಲ್ ಜಗತ್ತಿನಲ್ಲಿ ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮಗಳನ್ನು ನಡೆಸಿದೆ. ಅವುಗಳಲ್ಲಿ ನಿರ್ಣಾಯಕವಾದ ಮಾನ್ಯತಾ, ತಾಯಿಯ ಆರೈಕೆಯನ್ನು ಒದಗಿಸುವ ಖಾಸಗಿ ಸೌಲಭ್ಯಗಳಿಗಾಗಿ () ನೀಡುವ ಗುಣಮಟ್ಟದ ಸುಧಾರಣೆ ಮತ್ತು ಪ್ರಮಾಣೀಕರಣ ಸೇರಿದೆ. ಆರ್ಟಿಸ್ಟ್ ಫಾರ್ ಹರ್ ಪ್ರಾಯೋಗಿಕವಾಗಿ ಕಾರ್ಯಕ್ರಮವನ್ನು ಮಾಡಿ ಡಿಜಿಟಲ್ ಸ್ವರೂಪದ ಮೂಲಕ ಅಗತ್ಯ ತರಬೇತಿಯನ್ನು ನೀಡಿದೆ. ಭಾರತ ಮತ್ತು ಇತರ ಕೆಳಮಧ್ಯಮ ಆರೋಗ್ಯ ವ್ಯವಸ್ಥೆ ಹೊಂದಿರುವ ರಾಷ್ಟ್ರಗಳಿಗೆ ಮಹಿಳಾ ಆರೋಗ್ಯ ರಕ್ಷಣೆಯ ಮಾರ್ಗದರ್ಶಿ ಸೂತ್ರಗಳನ್ನು ಪುನರ್ ವ್ಯಾಖ್ಯಾನಿಸುವ (ಸ್ತ್ರೀರೋಗಶಾಸ್ತ್ರದಲ್ಲಿ ಗುರುತಿಸಲ್ಪಡುವ ಮತ್ತು ಸೃಜನಶೀಲ ಅಧ್ಯಯನದ ಒಯಾಸಿಸ್) ಬೃಹತ್ ವರ್ಚುವಲ್ ಕೌಶಲ್ಯಾಭಿವೃದ್ಧಿ ವೇದಿಕೆ ಹೊಂದಿದೆ. ಫಾರ್ಹ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ಗೈನಾಕಾಲಜಿ ಮತ್ತು ಪ್ರಸೂತಿ ಶಾಸ್ತ್ರದ ಮೂಲಕ ಗರ್ಭಧಾರಣೆ, ಸ್ಥೂಲಕಾಯತೆ ಮತ್ತು ಪೋಷಣೆಯ ಕಾರ್ಯಯೋಜನೆಯ () ಘೋಷಣೆ ಮತ್ತು ಗರ್ಭಾವಸ್ಥೆ ಮತ್ತು ನಾನ್-ಕಮ್ಯುನಿಕಬಲ್ ಡಿಸೀಸ್ ಕಮಿಟಿಯು ಕಾರ್ಯಸೂಚಿ ಅನುಷ್ಠಾನಗೊಳಿಸಲು ಡಿಜಿಟಲೀಕರಣದ ಪ್ರಯೋಜನವನ್ನು ಪಡೆದುಕೊಂಡಿದೆ. ಡಿಜಿಟಲೀಕರಣವು ಕೆಳಮಟ್ಟದ ಆರೋಗ್ಯಕ್ಷೇತ್ರಕ್ಕೂ ಸಹಾಯ ಮಾಡಿದೆ. ಆರ್ಟಿಸ್ಟ್ನಪ್ರಾಯೋಗಿಕ ಯೋಜನೆ – ಕರ್ನಾಟಕದ ನಂಜನಗೂಡು ಕ್ಷೇತ್ರದ “ಹೆಮ್ಮರಗಾಲ ಮಾದರಿ ಆರೋಗ್ಯ ಮತ್ತು ಯೋಗಕ್ಷೇಮ ಗ್ರಾಮ” ಒಂದು ಪಿಪಿಪಿ ಮಾದರಿಯಾಗಿದೆ, ಇದು ಹೊಸ ಗ್ರಾಮೀಣ ಕಡಿಮೆ-ಡೋಸ್ ಐ-ಇಂಪ್ಯಾಕ್ಟ್ ರೀತಿಯ ಮುನ್ನೆಚ್ಚರಿಕೆಯ ಆರೋಗ್ಯ ವಿತರಣಾ ವ್ಯವಸ್ಥೆಗೆ ದಾರಿಯಾಗಿದೆ, ಇದನ್ನು ರಾಜ್ಯಾದ್ಯಂತ ಜಾರಿಗೆ ತರಬಹುದು. “ಈ ಯೋಜನೆಯ ನಿರಂತರತೆಯು ಮುಂದಿನ ಕೆಲವು ತಿಂಗಳುಗಳಲ್ಲಿ ಡಿಜಿಟಲ್ ಫ್ಲಾಟ್ ಫಾರ್ಮ್, ಮೂಲಕ ಒದಗಿಸುವವರಿಗೆ ಆತ್ಮವಿಶ್ವಾಸ ಮತ್ತು ಕೌಶಲ್ಯ ವರ್ಗಾವಣೆಯ ಮೂಲಕ ಮುಂಜಾಗ್ರತಾ ಆರೋಗ್ಯಸೇವೆಯನ್ನು ನೀಡುವ ಸಾಮರ್ಥ್ಯ ಬೆಳೆಸಿಕೊಳ್ಳಲು ಅವಕಾಶ ಕಲ್ಪಿಸುತ್ತದೆ. ಸಮಸ್ಯೆಗಳನ್ನು ಮೊದಲೇ ಗುರುತಿಸಲು ಮತ್ತು ಉಲ್ಲೇಖಿಸಲು ತಮ್ಮ ವಿವೇಚನೆಯನ್ನು ಬಳಸಲು ಇದು ಅವರಿಗೆ ಸಹಾಯಮಾಡುತ್ತದೆ ”ಎಂದು ಡಾ. ಹೇಮಾ ತಿಳಿಸಿದರು. ಜನನಿ ಹೆಲ್ಪ್‌ ಲೈನ್‌ ಮತ್ತೊಂದು ನವೀನ ಉಪಕ್ರಮವಾಗಿದ್ದು ಭಾರತದಲ್ಲಿ ಮಹಿಳೆಯರು ತಜ್ಞರೊಂದಿಗೆ ಸಮಾಲೋಚನೆ ನಡೆಸಲು ವ್ಯವಸ್ಥೆಯನ್ನು ಕಲ್ಪಿಸುತ್ತದೆ. ಮುಂಚೂಣಿಯಲ್ಲಿರುವ 1000 ಆರೋಗ್ಯಸೇವೆ ಒದಗಿಸುವವರ ಮೂಲಕ, ನಂಜನಗೂಡು ಕ್ಷೇತ್ರದಲ್ಲಿ ಫಲಾನುಭವಿಗಳ ಸಂಖ್ಯೆ ಸುಮಾರು ಒಂದುಲಕ್ಷ ಮಹಿಳೆಯರಾಗಲಿದ್ದಾರೆ. ವೆಲ್ತ್ ಹ್ಯೂಮನ್ ಹೆಲ್ತ್ ಕೇರ್ ಕಮಿಟಿಯಿಂದ ದತ್ತಾಂಶ ದಾಖಲಾತಿ ಮತ್ತು ಉಪಕ್ರಮದ ಪರಿಣಾಮವಾಗಿ ಪೌಷ್ಟಿಕಾಂಶ, ರಕ್ತಹೀನತೆ, ಮಧುಮೇಹದ ಸ್ಥಿತಿ ಮತ್ತು ಗರ್ಭನಿರೋಧಕದವರ್ಧಿತ ಬಳಕೆಯಲ್ಲಿನ ಸುಧಾರಣೆ ಕಂಡುಬಂದಿದ್ದು, ಅವೆಲ್ಲ ದಾಖಲಾಗಿದೆ. ಡಾ. ಹೇಮಾದಿವಾಕರ್ ಈ ಪ್ರತಿಷ್ಠಿತ ಸಮಿತಿಯ ಅಧ್ಯಕ್ಷರಾಗಿದ್ದಾರೆ. “ಹೆಮ್ಮರಗಾಲ ಮಾದರಿಯು ಡಿಜಿಟಲ್‌ ಮೂಲಕ ನೀಡಲಾಗುತ್ತಿರುವ ಆರೋಗ್ಯ ರಕ್ಷಣೆಯ ಭವಿಷ್ಯವಾಗಿದೆ. ಅಲ್ಲಿ ಜನಪ್ರತಿನಿಧಿಗಳು ಆರೋಗ್ಯ ತಜ್ಞರನ್ನು ಹಳ್ಳಿಗರ ಮನೆಬಾಗಿಲಿಗೆ ಕೊಂಡೊಯ್ಯುತ್ತಾರೆ, ಖಾಸಗಿ ಕಂಪನಿಗಳ ಸಹಯೋಗದೊಂದಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವುದನ್ನು ಖಚಿತಪಡಿಸಿಕೊಳ್ಳುತ್ತಾರೆ” ಎಂದು ಡಾ. ಹೇಮಾ ಹೇಳಿದರು.ಡಿಜಿಟಲೀಕರಣವು ಈಗ ವ್ಯಾಪಕವಾಗಿದ್ದರೂ, ಫಾರ್ಹರ್ ಸಂಪೂರ್ಣ ಆರೋಗ್ಯ ಪರಿಸರ ವ್ಯವಸ್ಥೆಗೆ ಪ್ರಯೋಜನವಾಗುವಂತೆ ವರ್ಚುವಲ್ ಮಾರ್ಗವನ್ನು ತೆಗೆದುಕೊಳ್ಳುವಲ್ಲಿ ಮುಂಚೂಣಿಯಲ್ಲಿದೆ ಎನ್ನುವುದನ್ನು ತೋರಿಸಿಕೊಟ್ಟಿದೆ. ಇತ್ತೀಚೆಗಷ್ಟೇ ಫಾರ್ಹ ಸಾಮರ್ಥ್ಯ ನಿರ್ಮಾಣದಲ್ಲಿ ಶ್ರೇಷ್ಠತೆಗಾಗಿ ಪ್ರಶಸ್ತಿಯನ್ನು ಪಡೆದಿದೆ. ಆರ್ಟಿಸ್ಟ್ ಫಾರ್ ಹರ್ ಏಷ್ಯನ್ ರಿಸರ್ಚ್ ಅಂಡ್ ಟ್ರೇನಿಂಗ್ ಇನ್ಸ್ ಟಿಟ್ಯೂಟ್ ಫಾರ್ ಸ್ಕಿಲ್ ಟ್ರಾನ್ಸ್ ಫರ್ (), ಕಲಿಕೆಯ ಪ್ರಮುಖ ಸಂಸ್ಥೆಯಾಗಿದ್ದು, ಬೆಂಗಳೂರು ಹೊರಗೆ ಕೆಲಸ ಮಾಡುತ್ತಿದೆ ಮತ್ತು ಭಾರತದಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗತಜ್ಞರ () ಸಾಮರ್ಥ್ಯಗಳನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಭಾರತದಾದ್ಯಂತ ಪ್ರಸೂತಿ ಮತ್ತು ಸ್ತ್ರೀರೋಗತಜ್ಞರ ಜ್ಞಾನ, ವರ್ತನೆ ಮತ್ತು ಅಭ್ಯಾಸಗಳನ್ನು () ವ್ಯಾಪಕವಾಗಿ ಸಮೀಕ್ಷೆ ಮಾಡಿದ ನಂತರ, ತಜ್ಞರು ಆಶ್ಚರ್ಯಕರ ಸಂಗತಿಗಳನ್ನು ಸಂಗ್ರಹಿಸಲು ಮತ್ತು ಗಳಲ್ಲಿ ಗಳನ್ನು ಗುರುತಿಸಲು ಸಮರ್ಥರಾಗಿದ್ದಾರೆ. ಈ ಅಂತರವನ್ನು ತುಂಬಲು ತರಬೇತಿ, ಬೋಧನೆ ಮತ್ತು ಸಂಶೋಧನೆ ನಡೆಸುತ್ತದೆ. ಪರಿಣಿತ ಆರೋಗ್ಯ ವೃತ್ತಿಪರರ ಗುಂಪು, ವೃತ್ತಿಪರ ಸಂಸ್ಥೆಗಳ ನಾಯಕರು (ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ) ಪ್ರಮುಖ ಅಭಿಪ್ರಾಯ ರೂಪಿಸುವವರು, ಸಂಶೋಧಕರು, ಶಿಕ್ಷಣ ತಜ್ಞರು ಮತ್ತು ಅಧ್ಯಯನದಲ್ಲಿ ಪ್ರಮುಖ ವೈದ್ಯರ ತಂಡವನ್ನು ಒಳಗೊಂಡಿದೆ. ? ಹೆಚ್ಚಿನಮಾಹಿತಿಗಾಗಿ, ದಯವಿಟ್ಟುಸಂಪರ್ಕಿಸಿ: ಡಾ.ಹೇಮಾದಿವಾಕರ್ಸಲಹೆಗಾರರು, ಮತ್ತು ವೈದ್ಯಕೀಯ ನಿರ್ದೇಶಕರು, ದಿವಾಕರ್ ಸ್ಪೆಷಾಲಿಟಿ ಆಸ್ಪತ್ರೆ, ಬೆಂಗಳೂರು.ಅಧ್ಯಕ್ಷರು, 2013, ಆರ್ಗನೈಸಿಂಗ್ಚೇರಮನ್ 2019, – (ಕೌಶಲ್ಯವರ್ಗಾವಣೆಗಾಗಿಏಷ್ಯನ್ಸಂಶೋಧನೆಮತ್ತುತರಬೇತಿಸಂಸ್ಥೆ), (ಅಂತರರಾಷ್ಟ್ರೀಯಸ್ತ್ರೀರೋಗತಜ್ಞರುಮತ್ತುಪ್ರಸೂತಿತಜ್ಞರಒಕ್ಕೂಟ).ಮೊಬೈಲ್: 9844046724 | ಇಮೇಲ್:@. : -----