ಮೇಕದಾಟು ಯೋಜನೆ ಅನುಷ್ಠಾನಕ್ಕೆ ಸಿದ್ಧ: ಪಾದಯಾತ್ರೆ ಕೈಬಿಡಿ- ಸಿಎಂ ಬೊಮ್ಮಾಯಿ ಮನವಿ. ಬೆಂಗಳೂರು,ಜನವರಿ,13,2022(..): ಮೇಕದಾಟು ಯೋಜನೆ ಅನುಷ್ಠಾನಕ್ಕೆ ಸರ್ಕಾರ ಸಿದ್ಧವಿದೆ. ಜನರ ಆರೋಗ್ಯ ದೃಷ್ಠಿಯಿಂದ ಪಾದಯಾತ್ರೆ ಕೈಬಿಡಿ ಎಂದು ಕಾಂಗ್ರೆಸ್ ನಾಯಕರಿಗೆ ಸಿಎಂ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ. ಈ ಸಂಬಂಧ ಕಾಂಗ್ರೆಸ್ ನಾಯಕರಿಗೆ ಮನವಿ ಮಾಡಿರುವ ಸಿಎಂ ಬೊಮ್ಮಾಯಿ, ನಿಮ್ಮೆಲ್ಲ ವಿಶ್ವಾಸದೊಂದಿಗೆ ಯೋಜನೆ ಅನುಷ್ಠಾನ ಮಾಡುತ್ತೇವೆ. ಕೊರೋನಾ 3ನೇ ಅಲೆ ತೀವ್ರವಾಗಿದೆ. ಕೊರೋನಾದಿಂದ ಜನ ಜೀವನದ ಮೇಲೆ ದುಷ್ಪರಿಣಾಮ ಉಂಟಾಗಿದೆ . ಈ ವೇಳೆ ಪಾದಯಾತ್ರೆ ಸರಿಯಲ್ಲ. ಸಾರ್ವಜನಿಕರ ಆರೋಗ್ಯ ದೃಷ್ಠಿಯಿಂದ ಕೈ ಬಿಡಿ ಎಂದಿದ್ದಾರೆ. ಹೈಕೋರ್ಟ್ ಕೂಡ ತೀವ್ರವಾದ ಅಭಿಪ್ರಾಯ ವ್ಯಕ್ತಪಡಿಸಿದೆ. ಎಲ್ಲರೂ ಸೇರಿ ಕೊರೋನಾ ಎದರಿಸೋಣ. ಮುಂದಿನ ದಿನಗಳಲ್ಲಿ ಯೋಜನೆ ಅನುಷ್ಠಾನ ಮಾಡೋಣ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ. : – – -