ಮಾನಸ ಗಂಗೋತ್ರಿಯಲ್ಲಿ ಬ್ಯಾಟರಿ ಚಾಲಿತ ವಾಹನಕ್ಕೆ ಬೇಡಿಕೆ. ಮೈಸೂರು,ಜನವರಿ,11,2022(..):ಅಚ್ಚ ಹಸಿರಿನ ಮೈಸೂರಿನ ಮಾನಸ ಗಂಗೋತ್ರಿ ಆವರಣದಲ್ಲಿ ಇದೀಗ ಶಬ್ಧ ಹಾಗೂ ವಾಯು ಮಾಲಿನ್ಯ ರಹಿತ ಎರಡು ವಾಹನಗಳು ಸಂಚರಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಉಚಿತ ಸೇವೆ ಒದಗಿಸುತ್ತಿವೆ. ಮಾನಸ ಗಂಗೋತ್ರಿ ಕ್ಯಾಂಪಸ್ ನೈಸರ್ಗಿಕ ಸೌಂದರ್ಯ ಇರುವ ವಿಶಾಲ ಪ್ರದೇಶ ಹೊಂದಿದೆ. ಇಲ್ಲಿ ಒಂದು ವಿಭಾಗದಿಂದ ಮತ್ತೊಂದು ವಿಭಾಗಕ್ಕೆ ವಿದ್ಯಾರ್ಥಿಗಳು, ಪೋಷಕರು ಸಂಚರಿಸಲು ಅನುಕೂಲವಾಗುವಂತೆ ಮೈಸೂರು ವಿಶ್ವವಿದ್ಯಾಲಯ ಬ್ಯಾಟರಿ ಚಾಲಿತ ‘ಇ ಕಾರ್ಟ್’ ವಾಹನಗಳನ್ನು ಒದಗಿಸಿದೆ. ಸದ್ಯ ಎರಡು ಬ್ಯಾಟರಿ ಚಾಲಿತ ವಾಹನಗಳು ಕ್ಯಾಂಪಸ್‌ ನಲ್ಲಿ ಸಂಚರಿಸುತ್ತಿವೆ. ಉಚಿತ ಸೇವೆ: ಚಾಲಕ ಸೇರಿದಂತೆ 9 ಆಸನ ಸಾಮಾರ್ಥ್ಯವುಳ್ಳ ಎರಡು ಇ-ಕಾರ್ಟ್‌ ಗಳನ್ನು ಖರೀದಿಸಲಾಗಿದೆ. ಕಳೆದ ಎರಡು ವರ್ಷದಿಂದ ಈ ವಾಹನಗಳು ವಿದ್ಯಾರ್ಥಿಗಳಿಗೆ ಹಾಗೂ ಅವರ ಪಾಲಕರಿಗೆ ಒಂದೆಡೆಯಿಂದ ಮತ್ತೊಂದೆಡೆ ಹೋಗಲು ನೆರವು ನೀಡುತ್ತಿವೆ. ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೆ ಈ ಸೇವೆ ಉಚಿತವಾಗಿ ಲಭ್ಯವಿದೆ. “ಮೊದಲೆಲ್ಲಾ ಹಾಸ್ಟೆಲ್ ನಿಂದ ತಿಂಡಿ ಮುಗಿಸಿ ತರಗತಿಗೆ ಹಾಜರಾಗಲು ತಡವಾಗುತ್ತಿತ್ತು. ಆದರೆ ಇದೀಗ ಬ್ಯಾಟರಿ ಚಾಲಿತ ವಾಹನ‌ ವ್ಯವಸ್ಥೆ ಮಾಡಿರುವುದರಿಂದ ತರಗತಿಗೆ ಸರಿಯಾಗಿ ಹಾಜರಾಗುತ್ತಿದ್ದೇನೆ. ಅಪ್ಪ ಅಮ್ಮ ಬರಲು ಕೂಡ ಅನುಕೂಲ ಆಗಿದೆ. ಈ ಸೇವೆ ಒದಗಿಸಿದ ವಿಶ್ವವಿದ್ಯಾನಿಲಯಕ್ಕೆ ಧನ್ಯವಾದಗಳು ಎಂದು ವಿದ್ಯಾರ್ಥಿನಿ ಬೆಳಕು ಸಂತಸ ವ್ಯಕ್ತಪಡಿಸಿದ್ದಾರೆ. ಎಲ್ಲಿರುತ್ತದೆ ವಾಹನ? ಗಂಗೋತ್ರಿ ಕ್ಯಾಂಪಸ್‌ ನ ದಕ್ಷಿಣ ದ್ವಾರದ ಕುವೆಂಪು ಪ್ರತಿಮೆ ಬಳಿ ಒಂದು ಹಾಗೂ ವಿಜ್ಞಾನ ಭವನದ ಸಮೀಪ ಮತ್ತೊಂದು ವಾಹನ ನಿಂತಿರುತ್ತದೆ. ವಿದ್ಯಾರ್ಥಿಗಳಿಗೆ ಚಾಲಕರ ಫೋನ್ ನಂಬರ್ ನೀಡಲಾಗಿದ್ದು, ಕರೆ ಮಾಡಿದರೆ ಸೇವೆ ನೀಡುವ ವ್ಯವಸ್ಥೆ ಮಾಡಲಾಗಿದೆ. ‘‘ನಮ್ಮ ವಿಶ್ವವಿದ್ಯಾಲಯದ ಕ್ಯಾಂಪಸ್‌ ಗೆ ವಿದ್ಯಾರ್ಥಿಗಳನ್ನು ನೋಡಲು ಹಿರಿಯ ನಾಗರಿಕರು ಹಾಗೂ ಹಳ್ಳಿಯಿಂದ ಪಾಲಕರು ಬರುತ್ತಾರೆ. ವಿವಿ ಆವರಣ ವಿಶಾಲವಾಗಿದೆ. ಒಂದು ಕಡೆಯಿಂದ ಮತ್ತೊಂದು ಕಡೆ ಹೋಗಲು ನಡೆದೇ ಹೋಗಬೇಕು. ಇದನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಅನುಕೂಲವಾಗಲೆಂದು ಎರಡು ಇ-ಕಾರ್ಟ್ ಬ್ಯಾಟರಿ ಚಾಲಿತ ವಾಹನಗಳ ಸೌಲಭ್ಯ ಒದಗಿಸಲಾಗಿದೆ. ವಿದ್ಯಾರ್ಥಿಗಳಿಂದ ಬೇಡಿಕೆ ಬಂದರೆ ಮತ್ತೆರಡು ವಾಹನಗಳ ಸೇವೆ ನೀಡಲಾಗುವುದು,’’ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ. : –- - - … , 11, 2022 (..): , - - . , . -, - ‘ ’. . . . 9 . - . 9.00 6.00 . , “ . - -, . . .” , . , .“ . , . , . , ,” . . , -, .: / -/ - /