ನಾನು ಸಚಿವ ಸ್ಥಾನದ ಆಕಾಂಕ್ಷಿ: ಹೈಕಮಾಂಡ್ ಗೆ ಮನವಿ ಮಾಡುವೆ- ಎಂಎಲ್ ಸಿ ವೈಎ ನಾರಾಯಣಸ್ವಾಮಿ ಕೋಲಾರ,ಜನವರಿ,6,2022(..):ನಾನು ಸಚಿವ ಸ್ಥಾನದ ಆಕಾಂಕ್ಷಿ. ನನಗೆ ಸಚಿವ ಸ್ಥಾನ ನೀಡುವಂತೆ ಹೈಕಮಾಂಡ್ ಗೆ ಮನವಿ ಮಾಡುವೆ ಎಂದು ವಿಧಾನಪರಿಷತ್ ಸದಸ್ಯ ವೈಎ ನಾರಾಯಣ ಸ್ವಾಮಿ ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಎಂಎಲ್ ಸಿ ವೈಎ ನಾರಾಯಣ ಸ್ವಾಮಿ, ನಾನು 4 ಬಾರಿ ಶಾಸಕನಾಗಿದ್ದೇನೆ ಸಚಿವ ಸ್ಥಾನಕ್ಕೆ ನಾನು ಸಮರ್ಥನಿದ್ದೇನೆ. ಸಮರ್ಥವಾಗಿ ಖಾತೆ ನಿಭಾಯಿಸುತ್ತೇನೆ. ಸಚಿವ ಸ್ಥಾನ ನೀಡಿದರೇ ಕೋಲಾರ ಜಿಲ್ಲೆ ಅಭಿವೃದ್ದಿ ಮಾಡುತ್ತೇನೆ. ಹೀಗಾಗಿ ಮಂತ್ರಿಸ್ಥಾನ ನೀಡುವಂತೆ ಹೈಕಮಾಂಡ್ ಗೆ ಮನವಿ ಮಾಡುವೆ ಎಂದಿದ್ದಾರೆ. ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಚರ್ಚೆಯಾಗುತ್ತಿತ್ತು. ಆದರೆ ಇದಕ್ಕೆ ಬ್ರೇಕ್ ಬಿದ್ದಿದ್ದು, ಸಚಿವಾಕಾಂಕ್ಷಿಗಳು ಸಂಪುಟ ವಿಸ್ತರಣೆಗಾಗಿ ಕಾದು ಕುಳಿತಿದ್ದಾರೆ. : - - – - -