ನಾಳೆ ರಾತ್ರಿಯಿಂದ ಕಟ್ಟುನಿಟ್ಟಿನ ವೀಕೆಂಡ್ ಕರ್ಫ್ಯೂ: ಸರ್ಕಾರದಿಂದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ. ಬೆಂಗಳೂರು,ಜನವರಿ,6,2022(..):ರಾಜ್ಯದಲ್ಲಿ ಕೊರೊನಾ ಹೆಚ್ಚಳವಾಗುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನ ವಿಧಿಸಲು ಮುಂದಾಗಿದ್ದು ನಾಳೆ ರಾತ್ರಿಯಿಂದ ಕಟ್ಟುನಿಟ್ಟಿನ ವೀಕೆಂಡ್ ಕರ್ಫ್ಯೂ ಜಾರಿಯಾಗಲಿದೆ. ಈ ಸಂಬಂಧ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿರುವ ಸರ್ಕಾರ, ಕಟ್ಟುನಿಟ್ಟಾಗಿ ವೀಕೆಂಡ್ ಕರ್ಫ್ಯೂ ಜಾರಿ ಮಾಡುವಂತೆ ಸೂಚಿಸಿದೆ. ವೀಕೆಂಡ್ ಕರ್ಫ್ಯೂ ವೇಳೆ ಬಾರ್ , ಹೊಟೆಲ್ ರೆಸಾರ್ಟ್, ರೆಸ್ಟೋರೆಂಟ್ ಮುಚ್ಚಿಸುವಂತೆ ಸುತ್ತೋಲೆಯಲ್ಲಿ ತಿಳಿಸಿದೆ. ನಾಳೆ ರಾತ್ರಿಯಿಂದ ಸೋಮವಾರ ಬೆಳಗ್ಗೆ 6ರ ತನಕ ಬಂದ್‌ ಮಾಡಲು ಆದೇಶ ಪತ್ರದಲ್ಲಿ ಹೇಳಾಗಿದೆ. ವೀಕೆಂಡ್ ಕರ್ಫ್ಯೂ ವೇಳೆ ಬಾರ್ ಗಳು ತೆರೆದಿರುತ್ತದೆ. ಕೇವಲ ಪಾರ್ಸಲ್ ಗೆ ಮಾತ್ರವೇ ಅವಕಾಶ ಇರುತ್ತದೆ ಎನ್ನಲಾಗುತ್ತಿತ್ತು. ಆದರೆ ವಾರಾಂತ್ಯ ಕರ್ಪ್ಯೂ ಸಂದರ್ಭದಲ್ಲಿ ಬಾರ್ ಗಳು ಕ್ಲೋಸ್ ಆಗಲಿದೆ.ಕಳೆದ ಬಾರಿಯಂತೆ ಪಾರ್ಸಲ್ ಗೆ ಅವಕಾಶ ಇರುವುದಿಲ್ಲ ಎಂದು ಅಬಕಾರಿ ಇಲಾಖೆ ತಿಳಿಸಿದೆ. : - –