ಅಮೆಜಾನ್ ಪ್ರೈಂಗೆ ಬರುತ್ತಿದೆ ಅಲ್ಲು ಅರ್ಜುನ್ ‘ಪುಷ್ಪಾ’ ಬೆಂಗಳೂರು, ಜನವರಿ 06, 2022 (..):ಜನವರಿ 7ರಿಂದ ಅಲ್ಲು ಅರ್ಜುನ್ ನಟನೆಯ ಪುಷ್ಪ ಚಿತ್ರ ಒಒಟಿಗೆ ಬರುತ್ತಿದೆ. ಹೌದು, ಸಾಕಷ್ಟು ಮೆಚ್ಚುಗೆ ಪಡೆದ ಪುಷ್ಪ ಅಮೆಜಾನ್ ಪ್ರೈಂಗೆ ಬರುತ್ತಿದೆ. ಈ ಕುರಿತ ಅಧಿಕೃತ ಮಾಹಿತಿಯನ್ನು ಅಮೆಜಾನ್ ನೀಡಿದೆ. ‘ಪುಷ್ಪ’ ಚಿತ್ರದ ಹಿಂದಿ ಅವತರಣಿಕೆ ನಿರೀಕ್ಷೆಗೂ ಮೀರಿ ಯಶಸ್ಸು ಕಾಣುತ್ತಿದ್ದು, ರಣವೀರ್ ಸಿಂಗ್ ಹಾಗೂ ದೀಪಿಕಾ ನಟನೆಯ ’83’ ಚಿತ್ರಕ್ಕೆ ಭರ್ಜರಿ ಪೈಪೋಟಿ ನೀಡುತ್ತಿದೆ. ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿರುವ ಪುಷ್ಪಾ ಇದೀಗ ಹಲವು ದಾಖಲೆಗಳು ಚಿತ್ರದ ಪಾಲಾಗಿದ್ದು, ಚಿತ್ರತಂಡ ಸಖತ್ ಖುಷಿಯಾಗಿದೆ. ಆದರೆ ಕೋವಿಡ್ ಹೆಚ್ಚಳದ ಹಿನ್ನೆಲೆಯಲ್ಲಿ ಥಿಯೇಟರ್ ಗೆ ಶೇ.50ರಷ್ಟು ಸೀಟುಗಳ ಭರ್ತಿಗೆ ಅವಕಾಶ ನೀಡಿರುವುದರಿಂದ ಚಿತ್ರವನ್ನು ಒಒಟಿ ಯಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ.