ದೇಶದಲ್ಲಿ ಮತ್ತೆ ಕೊರೋನಾ ಉಲ್ಬಣ: ಒಂದೇ ದಿನದಲ್ಲಿ ಬರೋಬ್ಬರಿ 90,928 ಕೋವಿಡ್ ಕೇಸ್ ಪತ್ತೆ. ನವದೆಹಲಿ,ಜನವರಿ,6,2022(..):ದೇಶದಲ್ಲಿ ಕೊರೋನಾ ಸೋಂಕು ಮತ್ತಷ್ಟು ಹೆಚ್ಚಾಗುತ್ತಿದ್ದು ಕಳೆದ 24 ಗಂಟೆಯಲ್ಲಿ ಬರೋಬ್ಬರಿ 90,928 ಕೋವಿಡ್ ಪ್ರಕರಣಗಳು ಕಂಡು ಬಂದಿದೆ. ಈ ಕುರಿತು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಈ ಮೂಲಕ ಭಾರತದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 3,51,09,286 ಕ್ಕೆ ಏರಿಕೆಯಾಗಿದೆ. ನಿನ್ನೆಗಿಂತಲೂ ಇಂದು ಶೇ.56.5ರಷ್ಟು ಕೋವಿಡ್ ಕೇಸ್ ಹೆಚ್ಚಳವಾಗಿದೆ. ಹಾಗೆಯೇ ಕಳೆದ 24 ಗಂಟೆಯಲ್ಲಿ ಕೊರೊನಾದಿಂದ 325 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ಕೋವಿಡ್ ನಿಂದ ಮೃತಪಟ್ಟವರ ಸಂಖ್ಯೆ 4,82,876ಕ್ಕೆ ಏರಿಕೆಯಾಗಿದೆ. ದಿನದ ಪಾಸಿಟಿವಿಟಿ ದರ ಶೇ.6.43ಕ್ಕೆ ಏರಿಕೆಯಾಗಿದೆ. ಹಾಗೇ, ಸಕ್ರಿಯ ಪ್ರಕರಣಗಳ ಸಂಖ್ಯೆ 2,85,401ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 19,206ಮಂದಿ ಕೊರೊನಾದಿಂದ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಡಿಸ್​ಚಾರ್ಜ್​ ಆಗಿದ್ದಾರೆ. ಒಟ್ಟಾರೆ ಚೇತರಿಸಿಕೊಂಡವರ ಸಂಖ್ಯೆ 3,43,41,009ಕ್ಕೆ ತಲುಪಿದೆ. ಒಮಿಕ್ರಾನ್ ಸೋಂಕಿತರ ಸಂಖ್ಯೆ 2630ಕ್ಕೆ ಏರಿಕೆ. ಇನ್ನು ದೇಶದಲ್ಲಿ ದೇಶದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 2630ಕ್ಕೆ ಏರಿಕೆಯಾಗಿದ್ದು, ಈ ಪೈಕಿ 955ಮಂದಿ ಗುಣಮುಖರಾಗಿದ್ದಾರೆ. ಮಹಾರಾಷ್ಟ್ರದಲ್ಲಿ 797 ದೆಹಲಿಯಲ್ಲಿ 465 ಗುಜರಾತ್ ನಲ್ಲಿ 204 ಒಮಿಕ್ರಾನ್ ಪ್ರಕರಣಗಳಿವೆ. : - 90,928 - … : 90,928 24 , 6, 2022 (..): . 90,928 24 . , 3,51,09,286. 56.5% . 325 , 4,82,876. 6.43% 2,85,401. 24 19,206. 3,43,41,009. 2630, , 955 . 797 , 465 204 .: -19/ //