ರಾಜ್ಯದಲ್ಲಿ ಇಂದು ಹೊಸದಾಗಿ 2479 ಕೋವಿಡ್ ಪ್ರಕರಣಗಳು ಪತ್ತೆ. ಬೆಂಗಳೂರು,ಜನವರಿ,4,2022(..):ರಾಜ್ಯದಲ್ಲಿ ಕೋವಿಡ್ 3ನೇ ಅಲೆ ಭೀತಿ ಎದುರಾಗಿದ್ದು, ಇಂದು ಹೊಸದಾಗಿ 2,479 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಈ ಕುರಿತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಅದೇ ರೀತಿ ಇಂದು ಕೊರೊನಾ ಸೋಂಕಿಗೆ ನಾಲ್ವರು ಬಲಿ ಆಗಿದ್ದಾರೆ. ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇಕಡಾ 2.59ರಷ್ಟಿದೆ. ಎಂದು ಸಚಿವ ಡಾ.ಸುಧಾಕರ್​ ಮಾಹಿತಿ ನೀಡಿದ್ದಾರೆ. ಬೆಂಗಳೂರು ನಗರದಲ್ಲೇ ಹೊಸದಾಗಿ 2,053 ಕೊರೊನಾ ಪ್ರಕರಣಗಳು ಪತ್ತೆ ಆಗಿದೆ. ಆ ಮೂಲಕ, ಬೆಂಗಳೂರಿನಲ್ಲಿ ಕೊರೊನಾ ಕೇಸ್​ಗಳ ಸಂಖ್ಯೆ 2 ಸಾವಿರ ಗಡಿ ದಾಟಿದಂತಾಗಿದೆ. ಬೆಂಗಳೂರಿನಲ್ಲಿ 24 ಗಂಟೆಯಲ್ಲಿ ಕೊರೊನಾ ಕೇಸ್​ ದ್ವಿಗುಣವಾಗಿದೆ. ನಿನ್ನೆ 1 ಸಾವಿರದಷ್ಟಿದ್ದ ಕೊರೊನಾ ಕೇಸ್​ ಇಂದು 2 ಸಾವಿರ ತಲುಪಿದೆ. : – 2479 – – – - .