ಡಿ.ಕೆ ಸುರೇಶ್ ಮತ್ತು ಅಶ್ವಥ್ ನಾರಾಯಣ್ ಕಿತ್ತಾಟ ವಿಚಾರ: ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು ಹೀಗೆ.. ರಾಮನಗರ,ಜನವರಿ,3,2022(..):ಕಾರ್ಯಕ್ರಮವೊಂದರಲ್ಲಿ ವೇದಿಕೆಯಲ್ಲೇ ಸಚಿವ ಅಶ್ವತ್ ನಾರಾಯಣ್ ಮತ್ತು ಡಿ.ಕೆ ಸುರೇಶ್ ಕಿತ್ತಾಡಿಕೊಂಡ ಘಟನೆ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ ಬೊಮ್ಮಾಯಿ, ಈಘಟನೆಗಳು ಅಭಿವೃದ್ದಿಯ ಮೇಲೆ ಪರಿಣಾಮ ಬೀರಲ್ಲ ಎಂದಿದ್ದಾರೆ. ಈ ಕುರಿತು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ನೆನೆಗುದಿಗೆ ಬಿದ್ದ ಕಾರ್ಯಕ್ರಮಗಳ ಚಾಲನೆಗೆ ಜಿಲ್ಲೆಗೆ ಬಂದಿದ್ದೇನೆ ನಾನು ಈ ಜಿಲ್ಲೆಗೆ ಕೊಡುಗೆ ಕೊಡಬೇಕು ಅಂತಾ ಬಂದಿದ್ದೇನೆ. ನಮಗೆ ನಾವು ರಾಜಕಾರಣ ಮಾಡಬಾರದು. ಗೋಡಾ ಹೈ ಮೈದಾನ್ ಹೈ ಅಂತಾ ಆಗಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಘಟನೆಗಳು ಅಭಿವೃದ್ದಿಯ ಮೇಲೆ ಪರಿಣಾಮ ಬೀರಲ್ಲ. ಚುನಾವಣೆಗೆ ಒಂದು ತಿಂಗಳು ಇದ್ದಾಗ ರಾಜಕೀಯ ಮಾಡೋಣ. ಜಿಲ್ಲೆಯ ಅಭಿವೃದ್ದಿ ಕರ್ನಾಟಕ ಅಭಿವಥದ್ದಿಗೆ ಸರ್ಕಾರ ಸಂಕಲ್ಪ ಮಾಡಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. : – - - - ,