ಪಾದಯಾತ್ರೆಯಲ್ಲಿ ರಾಜಕಾರಣ ಇಲ್ಲ: ಬಿಜೆಪಿ ದಪ್ಪ ಚರ್ಮದ ಸರ್ಕಾರದ ವಿರುದ್ಧ ನಿರಂತರ ಹೋರಾಟ- ಡಿಕೆ ಶಿವಕುಮಾರ್ ನುಡಿ. ಮೈಸೂರು,ಜನವರಿ,3,2022(..):ಮೇಕೆದಾಟು ಯೋಜನೆಗೆ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆಯನ್ನ ರಾಜಕೀಯ ಎಂದು ಬಿಂಬಿಸುತ್ತಿದ್ದಾರೆ. ಆದರೆ ಪಾದಯಾತ್ರೆಯಲ್ಲಿ ಯಾವುದೇ ರಾಜಕಾರಣ ಇಲ್ಲ. ಎಲ್ಲಾ ಪಕ್ಷದವರೂ ಪಾಲ್ಗೊಳ್ಳಬಹುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನುಡಿದರು. ಮೈಸೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ಧರಾಮಯ್ಯ ಜಂಟಿ ಸುದ್ಧಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಡಿ.ಕೆ ಶಿವಕುಮಾರ್, ಮೇಕೆದಾಟು ಯೋಜನೆಗೆ ಯಾವುದೇ ತೊಡಕಿಲ್ಲ, ಪಾದಯಾತ್ರೆಗೆ ಪ್ರತಿರೋಧ ಕೇಳಿ ಬರುತ್ತಿದೆ. ಹೊಟ್ಟೆಕಿಚ್ಚಿಗೆ ಯಾವುದೇ ಔಷಧ ಇಲ್ಲ . ನಾವು ಎಲ್ಲವನ್ನೂ ಜೀರ್ಣಿಸಿಕೊಳ್ಳುತ್ತೇವೆ. ಪಾದಯಾತ್ರೆಯಲ್ಲಿ ಯಾರೂ ಬೇಕಾದರು ಪಾಲ್ಗೊಳ್ಳಬಹುದು. ನೆಲ ಜಲದ ವಿಚಾರದಲ್ಲಿ ಹೋರಾಟ ಮಾಡುತ್ತೇವೆ. ಸರ್ಕಾರವನ್ನ ಎಚ್ಚರಿಸುವ ಕೆಲಸ ಮಾಡುತ್ತೇವೆ ಎಂದರು. ಬಿಜೆಪಿಯದ್ದು ದಪ್ಪ ಚರ್ಮದ ಸರ್ಕಾರ ನಮ್ಮ ಎಲ್ಲಾ ಹೋರಾಟ ಫಲಪ್ರದವಾಗುತ್ತಿದೆ. ಬಿಜೆಪಿ ದಮ್ಮ ಚರ್ಮದ ಸರ್ಕಾರ. ಹೀಗಾಗಿ ಸರ್ಕಾರ ವಿರುದ್ಧ ನಿರಂತರ ಹೋರಾಟ ನಡೆಯುತ್ತದೆ. ಕಾಂಗ್ರೆಸ್ ಪಾದಯಾತ್ರೆಯಲ್ಲಿ ರಾಜಕಾರಣ ಇಲ್ಲ ಸಿದ್ದರಾಮಯ್ಯ ಅವಧಿಯಲ್ಲಿ ಮೇಕೆದಾಟು ಯೋಜನೆಗೆ ಡಿಪಿಆರ್ ಪ್ರಕ್ರಿಯೆ ಆರಂಭವಾಯಿತು. ಸಮ್ಮಿ ಶ್ರ ಸರ್ಕಾರದಲ್ಲಿ ಅದನ್ನ ಬಲಾಯಿಸಿ ಕಳುಹಿಸಿದ್ದವು ಎಂದರು. ಇತ್ತೀಚಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಮೇಲು ಗೈ ಸಾಧಿಸಿದೆ. ಬಿಜೆಪಿ ಹಿಂದಿಕ್ಕಿ ನಾವು ಮುನ್ನೆಲೆಗೆ ಬಂದಿದ್ದೇವೆ ನಮಗೆ ಅಧಿಕಾರ ಒಂದೇ ಮುಖ್ಯ ಅಲ್ಲ. ಕಾಂಗ್ರೆಸ್ ಗೆ ಸಾಮಾಜಿಕ ಕಳಕಳಿ ಇದೆ. ನಾವು ಟೀಕೆಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಮುಂದೇ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. : –- - - - – ’- – … : - – .. , 3, 2022 (..): “ . . ,” .. . , . .. , , . “ . . . . ,” .: / .. / / /