ನಟ ಜಾನ್ ಅಬ್ರಹಾಂ ದಂಪತಿಗೆ ಕೋವಿಡ್ ಸೋಂಕು ದೃಢ ಬೆಂಗಳೂರು, ಜನವರಿ 03, 2022 (..):ನಟ ಜಾನ್ ಅಬ್ರಹಾಂ, ಪತ್ನಿ ಪ್ರಿಯಾಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ಇನ್ಸ್ಟಾಗ್ರಾಮ್ ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಜಾನ್ ಅಬ್ರಹಾಂ, ನನಗೆ ಹಾಗೂ ನನ್ನ ಪತ್ನಿಗೆ ಕೊರೋನಾ ಸೋಂಕು ತಗುಲಿದ್ದು, ಇಬ್ಬರೂ ಹೋಂ ಕ್ವಾರಂಟೈನ್‌ನಲ್ಲಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಕೋವಿಡ್ ಪಾಸಿಟಿವ್ ಬಂದಿದ್ದ ವ್ಯಕ್ತಿಯನ್ನು ಮೂರು ದಿನಗಳ ಹಿಂದೆ ಸಂಪರ್ಕಿಸಿದ್ದೆ. ಇದೀಗ ನನಗೂ ಹಾಗೂ ನನ್ನ ಪತ್ನಿಗೂ ಸೋಂಕು ತಗುಲಿದ್ದು, ಇಬ್ಬರೂ ಹೋಮ್ ಕ್ವಾರಂಟೈನ್ ನಲ್ಲಿದ್ದೇವೆಂದು ಹೇಳಿದ್ದಾರೆ. ನನಗೆ ಹಾಗೂ ನನ್ನ ಪತ್ನಿಗೆ ಸೌಮ್ಯ ಲಕ್ಷಣಗಳು ಕಂಡು ಬಂದಿದೆ. ಇಬ್ಬರೂ ಎರಡೂ ಡೋಸ್ ಲಸಿಕೆ ಪಡೆದುಕೊಂಡಿದ್ದೆವು. ಹೀಗಾಗಿ ಯಾವುದೇ ರೋಗ ಲಕ್ಷಣವಿಲ್ಲ. ಆದರೆ ಮುನ್ನೆಚ್ಚರಿಕೆ ವಹಿಸಿದ್ದೇವೆ ಎಂದು ತಿಳಿಸಿದ್ದಾರೆ.