ಟ್ವಿಟ್ಟರ್’ನಲ್ಲಿ ಹೊಸ ದಾಖಲೆ ಮೂಲಕ 2022ಕ್ಕೆ ಎಂಟ್ರಿ ಕೊಟ್ಟ ಮಹೇಶ್ ಬಾಬು ಬೆಂಗಳೂರು, ಜನವರಿ 03, 2022 (..):ಸೂಪರ್ ಸ್ಟಾರ್ ಮಹೇಶ್ ಬಾಬು ಟ್ವೀಟರ್ ನಲ್ಲಿ ಹೊಸ ದಾಖಲೆ ನಿರ್ಮಿಸುವುದರೊಂದಿಗೆ ಹೊಸ ವರ್ಷವನ್ನು ಪ್ರಾರಂಭಿಸಿದ್ದಾರೆ. ಹೌದು, ಸೂಪರ್ ಸ್ಟಾರ್ ಮಹೇಶ್ ಬಾಬು ಸಾಮಾಜಿಕ ಜಾಲತಾಣದಲ್ಲಿ ಅಪರೂಪದ ಸಾಧನೆ ಮಾಡಿದ್ದಾರೆ. ಕುಟುಂಬದೊಂದಿಗೆ ಇರುವ ಫೋಟೋವನ್ನು ಟ್ವೀಟರ್ ನಲ್ಲಿ ಫೋಸ್ಟ್ ಮಾಡಿ ಎಲ್ಲಾ ಅಭಿಮಾನಿಗಳಿಗೆ ಹೊಸ ವರ್ಷದ ಶುಭ ಹಾರೈಸಿದ್ದರು. ಈ ಟ್ವೀಟ್ ಮೈಕ್ರೋಬ್ಲಾಗಿಂಗ್ ಸೈಟ್ ನಲ್ಲಿ ದಾಖಲೆ ಸಂಖ್ಯೆಯ ಲೈಕ್ ಪಡೆದಿದೆ. ಮಹೇಶ್ ಬಾಬು ಒಂದು ಟ್ವೀಟ್ ಮಾಡಿದರೆ ಲಕ್ಷಕ್ಕೂ ಅಧಿಕ ಲೈಕ್ಸ್ ಬರುತ್ತವೆ. ಅವರು ಟ್ವೀಟ್ ಮಾಡಿದ ಕೆಲವೇ ಗಂಟೆಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಲೈಕ್ ಗಳನ್ನು ಪಡೆದ 31ನೇ ಟ್ವೀಟ್ ನ್ನು ಹೊಸ ವರ್ಷದ ಸಂದರ್ಭದಲ್ಲಿ ಮಾಡಲಾಗಿದೆ. ಈ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಈ ಅಪರೂಪದ ಸಾಧನೆ ಮಾಡಿದ ಏಕೈಕ ಭಾರತೀಯ ನಟ ಎಂಬ ಹೆಗ್ಗಳಿಕೆಗೆ ಮಹೇಶ್ ಬಾಬು ಪಾತ್ರರಾಗಿದ್ದಾರೆ.