ಜಮ್ಮುವಿನ ಮಾತಾ ಶ್ರೀ ವೈಷ್ಣೋದೇವಿ ದೇವಾಲಯದಲ್ಲಿ ನೂಕುನುಗ್ಗಲು: 12 ಮಂದಿ ಮೃತ ನವದೆಹಲಿ, ಜನವರಿ 1, 2022 (..):ಜಮ್ಮುವಿನಲ್ಲಿರುವ ಮಾತಾ ಶ್ರೀ ವೈಷ್ಣೋದೇವಿ ದೇವಾಲಯದಲ್ಲಿ ಜನರ ನೂಕುನುಗ್ಗಲಿನಿಂದಾಗಿ 12 ಮಂದಿ ಮೃತಪಟ್ಟು ೧೨ಕ್ಕೂ ಹೆಚ್ಚಿನ ಮಂದಿ ಗಾಯಗೊಂಡಿರುವ ಘಟನೆ ವರದಿಯಾಗಿದೆ. ಹೆಚ್ಚಿನ ಸಂಖ್ಯೆಯ ಭಕ್ತರ ನೆರೆದಿದ್ದು ನೂಕುನುಗ್ಗಲು ಉಂಟಾಗಿ ಈ ಘಟನೆ ಜರುಗಿದೆ. ಅಧಿಕೃತ ಮೂಲಗಳ ಪ್ರಕಾರ ಈ ಘಟನೆ ತ್ರಿಕೂಟ ಬೆಟ್ಟಗಳ ಮೇಲಿರುವ ದೇವಾಲಯದ ಗರ್ಭಗುಡಿಯ ಆಚೆ ನಡೆದಿದೆ. ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ದೇವರ ದರ್ಶನ ಪಡೆಯಲು ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಸೇರಿದ್ದು, ಈ ಸಮಯದಲ್ಲಿ ನೂಕುನುಗ್ಗಲು ಉಂಟಾಗಿದೆ. ಒಮ್ಮೆಗೆ ಅನೇಕ ಜನರು ದೇವಾಲಯದ ಒಳಗೆ ನುಗ್ಗಿದ್ದಾರೆ. ಮಾತಾ ವೈಷ್ಣೋದೇವಿ ದೇವಾಲಯದಲ್ಲಿ ಜರುಗಿರುವ ಈ ದುರ್ಘಟನೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ವೈಯಕ್ತಿಕವಾಗಿ ನಿಗಾವಣೆ ವಹಿಸಿದ್ದಾರೆ ಎಂದು ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ತಮ್ಮ ಟ್ವೀಟ್ ಒಂದರಲ್ಲಿ ತಿಳಿಸಿದ್ದಾರೆ. ಘಟನೆಯಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಪ್ರಧಾನ ಮೋದಿಯವರು ತಮ್ಮ ಸಂತಾಪವನ್ನು ತಿಳಿಸಿದ್ದು, ಗಾಯಗೊಂಡಿರುವಿಗೆ ಅಗತ್ಯವಿರುವ ಎಲ್ಲಾ ವೈದ್ಯಕೀಯ ನೆರವನ್ನು ಒದಗಿಸುವಂತೆ ಸೂಚಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಎಲ್ಜಿ ಮನೋಜ್ ಸಿನ್ಹಾ ಅವರು ಈ ಘಟನೆಯ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ಜಮ್ಮುವಿನ ಎಡಿಜಿಪಿ ಹಾಗೂ ವಿಭಾಗೀಯ ಆಯುಕ್ತರೊಂದಿಗೆ ಪ್ರಧಾನ ಕಾರ್ಯದರ್ಶಿ (ಗೃಹ) ಅವರನ್ನು ಒಳಗೊಂಡಿರುವ ತನಿಖಾ ಸಮಿತಿ ಈ ಘಟನೆಯ ಕುರಿತು ತನಿಖೆಯನ್ನು ನಡೆಸಲಿದೆ. ಘಟನೆಯಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ತಲಾ ರೂ.10 ಲಕ್ಷ ಹಾಗೂ ಗಾಯಗೊಂಡವರಿಗೆ ತಲಾ ರೂ.2 ಲಕ್ಷ ಪರಿಹಾರ ವಿತರಿಸುವಂತೆ ಸೂಚಿಸಲಾಗಿದೆ. : 12 – – - – .. 12 12 . . . . , . . & . & - ’ #. () , , . - 10 ; 2 : &