ಜೆಸಿಬಿ ಹರಿದು 3 ವರ್ಷದ ಮಗು ದುರ್ಮರಣ. ಬೆಂಗಳೂರು,ಜನವರಿ,1,2022(..): ಜೆಸಿಬಿ ಹರಿದು 3 ವರ್ಷದ ಮಗು ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರದ ಉಪ್ಪಾರಪೇಟೆಯ ದನ್ವಂತರಿ ರಸ್ತೆ ಬಳಿ ಈ ಘಟನೆ ನಡೆದಿದೆ. 3 ವರ್ಷದ ಸಿಮಿಯಾನ್ ಮೃತಪಟ್ಟ ಮಗು. ನಿರ್ಮಾಣ ಹಂತದ ಕಟ್ಟಡ ಕಾಮಗಾರಿ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ. ರಿವರ್ಸ್ ತೆಗೆಯುವಾಗ ಜೆಸಿಬಿ ಮಗುವಿನ ಮೇಲೆ ಹರಿದದೆ. ಸ್ಥಳಕ್ಕೆ ಉಪ್ಪಾರಪೇಟೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಚಾಲಕ ಶಂಕರ್ ನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. : - - - 3-- –-