ರಾಜ್ಯದಲ್ಲಿ ಇಂದು 23 ಒಮಿಕ್ರಾನ್ ಪ್ರಕರಣಗಳು ಪತ್ತೆ. ಬೆಂಗಳೂರು,ಡಿಸೆಂಬರ್,31,2021(..):ಹೊಸ ವರ್ಷದ ಸಂಭ್ರಮಾಚರಣೆ ನಡುವೆ ರಾಜ್ಯದಲ್ಲಿ ಒಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿದೆ. ಇಂದು ಒಂದೇ ದಿನ ರಾಜ್ಯದಲ್ಲಿ 23 ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದೆ. 19 ಮಂದಿ ವಿದೇಶ ಪ್ರಯಾಣಿಕರಿಗೆ ಮತ್ತು ನಾಲ್ವರು ಸ್ಥಳೀಯರಿಗೆ ಒಮಿಕ್ರಾನ್ ಸೋಂಕು ದೃಢವಾಗಿದೆ. ಅಮೇರಿಕ ಯುರೋಪ್ ನಿಂದ ಬಂದವರಿಗೆ ಒಮಿಕ್ರಾನ್ ಸೋಂಕು ತಗುಲಿದೆ. 15 ವರ್ಷದ ಬಾಲಕ ಎರಡು ವರ್ಷದ ಮಗು ಸೇರಿ 23 ಮಂದಿಗೆ ಇಂದು ಕೊರೋನಾ ರೂಪಾಂತರಿ ಒಮಿಕ್ರಾನ್ ಸೋಂಕು ಕಾಣಿಸಿಕೊಂಡಿದೆ. ತಾಯಿ ಮಗು ತಾಂಜೇನಿಯಾದಿಂದ ಬಂದಿದ್ದರು. ಇದೀಗ ತಾಯಿಯಿಂದ ಮಗುವಿಗೂ ಒಮಿಕ್ರಾನ್ ತಗುಲಿದೆ ಎನ್ನಲಾಗಿದೆ. : 23 - – - .