ಬಂದ್ ಕೈ ಬಿಟ್ಟಿಲ್ಲ, ಮುಂದಕ್ಕೆ ಹಾಕಿದ್ದೇವೆ- ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್. ಬೆಂಗಳೂರು,ಡಿಸೆಂಬರ್,31,2021(..):ಸಿಎಂ ಬಸವರಾಜ ಬೊಮ್ಮಾಯಿ ಮನವಿ ಮೇರೆಗೆ ಕರ್ನಾಟಕ ಬಂದ್ ಮುಂದೂಡಿಕೆ ಮಾಡಲಾಗಿದೆ. ಬಂದ್ ಕೈ ಬಿಟ್ಟಿಲ್ಲ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದ್ದಾರೆ. ಎಂಇಎಸ್ ನಿಷೇಧಿಸುವಂತೆ ಕನ್ನಡ ಪರ ಹೊರಾಟಗಾರ ಪ್ರತಿಭಟನೆಗಿಳಿದಿದ್ದು ಇಂದು ಕರ್ನಾಟಕ ಬಂದ್ ಗೆ ಕರೆ ನೀಡಲಾಗಿತ್ತು. ಆದರೆ ನಿನ್ನೆ ಸಿಎಂ ಬಸವರಾಜ ಬೊಮ್ಮಾಯಿ ಅವರು ವಾಟಾಳ್ ನಾಗರಾಜ್ ಅವರ ಜತೆ ಮಾತುಕತೆ ನಡೆಸಿ ಬಂದ್ ಕೈ ಬಿಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಕರೆ ನೀಡಲಾಗಿದ್ದ ಬಂದ್ ಅನ್ನ ವಾಟಾಳ್ ನಾಗರಾಜ್ ವಾಪಸ್ ಪಡೆದರು. ಈ ಕುರಿತು ಮಾತನಾಡಿರುವ ವಾಟಾಳ್ ನಾಗರಾಜ್, ಎಂಇಎಸ್ ವಿರುದ್ಧ ಕ್ರಮ ಕೈಗೊಳ್ಳಬೇಕು. ಬಂದ್ ಕೈಬಿಟ್ಟಿಲ್ಲ ಮುಂದಕ್ಕೆ ಹಾಕಿದ್ದೇವೆ. ಎಂಇಎಸ್ ವಿರುದ್ಧ ಕಾನೂನಿನಡಿ ಕ್ರಮ ಕೈಗೊಳ್ಳುವುದಾಗಿ ಸಿಎಂ ಭರವಸೆ ನೀಡಿದ್ದರು. ಹೀಗಾಗಿ ಬಂದ್ ಕೈಬಿಟ್ಟಿದ್ದೇವೆ. ಇದನ್ನು ಇಷ್ಟಕ್ಕೆ ಬಿಡುವುದಿಲ್ಲ . ಬಂದ್ ವಾಪಸ್ ಪಡೆಯಲು ಒತ್ತಡ ಬಂದಿತ್ತು ಇಂತಹ ಒತ್ತಡಕ್ಕೆ ನಾನು ಮಣಿಯಲ್ಲ. ಆದರೆ ಸಿಎಂ ಮನವಿ ಮೇರೆಗೆ ಬಂದ್ ವಾಪಸ್ ಪಡೆದಿದ್ದೇವೆ. ಬಂದ್ ಬದಲು ರ್ಯಾಲಿ ಮಾಡುತ್ತೇವೆ ಸರ್ಕಾರ ಇದನ್ನು ಲಘುವಾಗಿ ಪರಿಗಣಿಸಬಾರದು ಎಂಇಎಸ್ ನಿಷೇಧಿಸಬೇಕು ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದರು. … “ ’ , ”: , 31, 2021 (..): “ . ,” - . - , . - 31. , , , . , . , . “ . . , , . , ’ ,” .“ . ’ . , ’ . . . ,” .: - / / / : – - - .