ಡಿ.ಕೆ ಶಿವಕುಮಾರ್ ಹಿಂದೂ ದೇಗುಲ ಮತ್ತು ಹಿಂದೂ ಭಕ್ತರ ವಿರುದ್ಧ- ಸಿಎಂ ಬೊಮ್ಮಾಯಿ ವಾಗ್ದಾಳಿ. ಬೆಂಗಳೂರು,ಡಿಸೆಂಬರ್,31,2021(..):ದೇವಾಲಯಗಳು ಮುಜರಾಯಿ ಮುಕ್ತ ಬಿಜೆಪಿ ಹಿಡನ್ ಅಜೆಂಡಾ ಎಂದು ಆರೋಪಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಡಿಕೆ ಶಿವಕುಮಾರ್ ಹಿಂದೂ ದೇಗುಲದ ಹಿಂದೂ ಭಕ್ತರ ವಿರುದ್ದ. ವಿರೋಧಿ ಅಭಿಪ್ರಾಯ ಎಂಬುದು ಸ್ಪಷ್ಟ. ಡಿಕೆಶಿಗೆ ಬೆಕ್ಕಿನ ಕನಸಲ್ಲಿ ಇಲಿ ಬಂದಂತಾಗಿದೆ ಎಂದು ಟೀಕಿಸಿದರು. ಹಾಗೆಯೇ ನಾವು ಯಾರಿಗೂ ದೇಗುಲಗಳನ್ನ ಹಸ್ತಾಂತರ ಮಾಡುತ್ತಿಲ್ಲ. ಕಟ್ಟುಪಾಡುಗಳನ್ನ ಮುಕ್ತ ಮಾಡುತ್ತಿದ್ದೇವೆ. ಆರೋಪ ಮಾಡೋದು ಬಿಟ್ಟ ಬೇರೆ ಕೆಲಸ ಇಲ್ಲ ಎಂದು ಡಿ.ಕೆ ಶಿವಕುಮಾರ್ ವಿರುದ್ಧ ಸಿಎಂ ಬೊಮ್ಮಾಯಿ ವಾಗ್ದಾಳಿ ನಡೆಸಿದರು. : - - – -