ರಾಜ್ಯ ಸಚಿವ ಸಂಪುಟ ಬದಲಾವಣೆ ಬಗ್ಗೆ ಸುಳಿವು ನೀಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್. ವಿಜಯಪುರ,ಡಿಸೆಂಬರ್,30,2021(..):ಸಿಎಂ ಬದಲಾವಣೆ ಸದ್ಧು ಮಾಡುತ್ತಿರುವ ಹೊತ್ತಿನಲ್ಲೇ ಇದೀಗ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯ ಸಚಿವ ಸಂಪುಟ ಬದಲಾವಣೆಯ ಸುಳಿವು ನೀಡಿದ್ದಾರೆ. ಹೌದು ಈ ಬಗ್ಗೆ ವಿಜಯಪುರದಲ್ಲಿ ಮಾಧ್ಯಮಗಳ ಜತೆ ಮಾತನಾಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಚಿವ ಸಂಪುಟ ಬದಲಾವಣೆ ಆಗಲಿದೆ. ಆದರೆ ಸಿಎಂ ಬದಲಾವಣೆ ಆಗಲ್ಲ ಸಿಎಂ ವಿದೇಶ ಪ್ರವಾಸಕ್ಕೆ ಹೋಗಲ್ಲ. ಸಂಪುಟ, ಸಂಘಟನೆಯಲ್ಲಿ ಬದಲಾವಣೆ ಆಗಲಿದೆ. ಚುನಾವಣೆ ಪಕ್ಷ ಸಂಘಟನೆಗೆ ಸಂಪುಟ ಬದಲಾವಣೆಯಾಗಲಿದೆ ಎಂದು ಹೇಳುವ ಮೂಲಕ ಹಲವು ಸಚಿವರ ಬದಲಾವಣೆ ಬಗ್ಗೆ ಸುಳಿವು ನೀಡಿದ್ದಾರೆ. ಗೃಹ ಸಚಿವ ಸ್ಥಾನದ ಆಸೆ ವ್ಯಕ್ತಪಡಿಸಿದ ಯತ್ನಾಳ್ ಗಟ್ಸ್ ಇರೋರು ಗೃಹ ಸಚಿವರಾಗಬೇಕು. ನಮ್ಮಂತವರಿಗೆ ಕೊಟ್ಟರೇ ಬರೋಬರಿ ಮಾಡ್ತೀವಿ. ಅರಗ ಜ್ಞಾನೇಂದ್ರ ಅವರಿಗೆ ಅರಣ್ಯ ಖಾತೆ ಸೂಕ್ತ ಎಂದರು. : - - – – . … , 30, 2021 (..): . . . , . , .: / / /