ಪೆನ್ ಡ್ರೈವ್ ಮಾಹಿತಿ ಕೇಳಿ ಪತ್ರ ಬರೆದ ಎಚ್.ವಿಶ್ವನಾಥ್. ಮೈಸೂರು,ಜುಲೈ,1,2024 (..):ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮುಡಾದ ನೋಂದಣಿ ಕಚೇರಿಯಲ್ಲಿ ನೋಂದಣಿ ಆಗಿರುವ ನಿವೇಶನಗಳ ಸಮಗ್ರ ವಿವರ ಕೇಳಿ ಪತ್ರ ಬರೆದಿದ್ದಾರೆ. ಮೂಡಾದಲ್ಲಿ 50:50 ಅನುಪಾತದ ನೆಪದಲ್ಲಿ ಬಹುಕೋಟಿ ಹಗರಣ ನಡೆದಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ , ಮಾಹಿತಿ ಕಲೆ ಹಾಕಲು ಎಂಎಲ್ಸಿ ಎ.ಎಚ್.ವಿಶ್ವನಾಥ್ ಮುಂದಾಗಿದ್ದಾರೆ. ಜಿಲ್ಲಾ ನೋಂದಣಾಧಿಕಾರಿ, ಮುಡಾ ನೋಂದಣಾಧಿಕಾರಿಗೆ ಪತ್ರ ಬರೆದಿರುವ ಹೆಚ್.ವಿಶ್ವನಾಥ್, ಪೆನ್‌ಡ್ರೈವ್‌ ನಲ್ಲಿ ಮಾಹಿತಿ ಕೊಡುವಂತೆ ಮನವಿ ಮಾಡಿದ್ದಾರೆ. 2020ರ ಜನವರಿಯಿಂದ ಇಂದಿನವರೆಗೂ ಮುಡಾದಲ್ಲಿ ನೋಂದಣಿ ಬಗ್ಗೆ, ಮುಡಾದ ನೋಂದಣಿ ಕಚೇರಿಯಲ್ಲಿ ನೋಂದಣಿ ಆಗಿರುವ ನಿವೇಶನಗಳ ಬಗ್ಗೆ ಪೆನ್ ಡ್ರೈವ್ ನಲ್ಲಿ ಸಮಗ್ರ ವಿವರ ನೀಡುವಂತೆ ಹೆಚ್.ವಿಶ್ವನಾಥ್ ಪತ್ರದಲ್ಲಿ ಮನವಿ ಮಾಡಿದ್ದಾರೆ. : . , , ,