‘ಶತಕದ ದಾಖಲೆ’ ಬರೆದ ಟೀಂ ಇಂಡಿಯಾದ ಜಸ್ ಪ್ರೀತ್ ಬುಮ್ರಾ ಬೆಂಗಳೂರು, ಡಿಸೆಂಬರ್ 30, 2021 (..):ಟೀಂ ಇಂಡಿಯಾ ಬೌಲರ್ ಜಸ್ ಪ್ರೀತ್ ಬುಮ್ರಾ ಹೊಸ ದಾಖಲೆ ನಿರ್ಮಿಸಿದ್ದಾರೆ. ಹೌದು. ಜಸ್ ಪ್ರೀತ್ ಬುಮ್ರಾ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಮಿಂಚುವ ಮೂಲಕ ವಿದೇಶೀ ನೆಲದಲ್ಲಿ 100 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಸೆಂಚೂರಿಯನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ಇನಿಂಗ್ಸ್ ನಲ್ಲಿ 2 ವಿಕೆಟ್ ಪಡೆಯುವ ಮೂಲಕ ಬುಮ್ರಾ 22 ಟೆಸ್ಟ್ ಗಳಲ್ಲಿ 101 ವಿಕೆಟ್ ಗಳಿಸಿದರು. ಭಾರತದ ಪರ ವಿದೇಶದಲ್ಲಿ ಅತೀ ಹೆಚ್ಚು ವಿಕೆಟ್ ಪಡೆದವರ ಸಾಲಿನಲ್ಲಿ ಮೊಹಮದ್ ಶಮಿ 140 ವಿಕೆಟ್ ಪಡೆದು ಮೊದಲ ಸ್ಥಾನದಲ್ಲಿದ್ದರೆ, ಮಾಜಿ ವೇಗಿ ಜಹೀರ್ ಖಾನ್ 137 ವಿಕೆಟ್ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ.