ಅಪ್ಪು ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ ಪ್ರಭಾಸ್ ಬೆಂಗಳೂರು, ಡಿಸೆಂಬರ್ 30, 2021 (..):ನಟ ಪ್ರಭಾಸ್ ಬೆಂಗಳೂರಿಗೆ ಬಂದು ಅಪ್ಪು ಅವರ ಮನೆಗೆ ಭೇಟಿ ಕೊಟ್ಟು, ಕುಟುಂಬದ ಜೊತೆಗೆ ಮಾತನಾಡಿದ್ದಾರೆ. ಹೌದು, ನಿನ್ನೆ ಸದ್ದಿಲ್ಲದೇ ಅಪ್ಪು ಅವರ ಮನೆಗೆ ಪ್ರಭಾಸ್‌ ಭೇಟಿ ನೀಡಿ ಕುಟುಂಬಸ್ಥರ ಜೊತೆಗೆ ಮಾತುಕಥೆ ನಡೆಸಿದ್ದಾರೆ. ಪುನೀತ್‌ ರಾಜ್‌ಕುಮಾರ್‌ ಪತ್ನಿ ಅಶ್ವಿನಿ ಅವರಿಗೆ ಸಾಂತ್ವನ ಹೇಳಿದ್ದಾರೆ. ನಟ ಪ್ರಭಾಸ್ ಅವರ ಹುಟ್ಟು ಹಬ್ಬಕ್ಕೆ ನಟ ಪುನೀತ್‌ ರಾಜ್‌ಕುಮಾರ್ ಶುಭ ಕೋರಿದ್ದರಂತೆ. ಅವರಿಗೆ ಕರೆ ಮಾಡಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದರಂತೆ. ಈ ವಿಷಯವನ್ನು ಈ ವೇಳೆ ಪ್ರಭಾಸ್ ಸ್ಮರಿಸಿದ್ದಾರೆ. ಬೇರೆ ಭಾಷೆಗಳ ಇತರೆ ನಟರ ಹಾಗೆ ಪ್ರಭಾಸ್‌ಗೂ ಅಪ್ಪು ಹತ್ತಿರ ಆಗಿದ್ದರು. ಹಾಗಾಗಿ ಪ್ರಭಾಸ್ ಸಮಯ ಮಾಡಿಕೊಂಡು ಬೆಂಗಳೂರಿನಲ್ಲಿ ಇರುವ ಅಪ್ಪು ಮನೆಗೆ ಭೇಟಿ ನೀಡಿ ಕುಟುಂಬದವರನ್ನು ಭೇಟಿ ಮಾಡಿದ್ದಾರೆ.