ಒಮೈಕ್ರಾನ್ ಆತಂಕ: ಬಿಡುಗಡೆ ಮುಂದೂಡಲ್ಲ ಎಂದ ಚಿತ್ರತಂಡ ಬೆಂಗಳೂರು, ಡಿಸೆಂಬರ್ 29, 2021 (..):‘ಆರ್​ಆರ್​ಆರ್​’ ಜನವರಿ 7ಕ್ಕೆ ರಿಲೀಸ್​ ಆಗುವ ವಿಚಾರವನ್ನು ಟ್ವೀಟ್​ನಲ್ಲಿ ಖಚಿತಪಡಿಸಿದೆ. ಕೊರೊನಾ ಸೋಂಕು ಮತ್ತೆ ಹೆಚ್ಚಳ ಹಿನ್ನೆಲೆಯಲ್ಲಿ ‘ಆರ್​ಆರ್​ಆರ್​’ ಸಿನಿಮಾ ತಂಡ ಕೂಡ ಸಿನಿಮಾ ರಿಲೀಸ್​ ದಿನಾಂಕ ಮುಂದೂಡಲಿದೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಈಗ ಚಿತ್ರ ತಂಡ ಮಾಹಿತಿ ಹೊರಹಾಕಿದೆ. ಜನವರಿ 7ಕ್ಕೆ ರಿಲೀಸ್​ ಆಗುವ ವಿಚಾರವನ್ನು ದೃಢಪಡಿಸಿದೆ. ಈ ಬಾರಿ ಕೊಂಚ ಮೊದಲೇ ಕೊವಿಡ್​ ಭಯ ಹೆಚ್ಚುತ್ತಿದೆ. ಹೀಗಾಗಿ, ದೇಶದಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗುತ್ತಿದೆ. ಕೆಲವು ಕಡೆಗಳಲ್ಲಿ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ. ಹೀಗಾಗಿ ಕೆಲ ಚಿತ್ರಗಳ ಬಿಡುಗಡೆ ದಿನಾಂಕ ಮುಂದೂಡಿಕೆಯಾಗುವ ನಿರೀಕ್ಷೆ ಇದೆ. ಹಿಂದಿಯ ‘ಜೆರ್ಸಿ’ ಸೇರಿದಂತೆ ಕೆಲವು ಚಿತ್ರಗಳು ರಿಲೀಸ್​ ದಿನಾಂಕ ಮುಂದೂಡಿವೆ.