ಇಂದಿನಿಂದ 10 ದಿನ ನೈಟ್ ಕರ್ಫ್ಯೂ: ಸ್ಥಿತಿಗತಿ ನೋಡಿ ಮುಂದಿನ ನಿರ್ಧಾರ- ಸಚಿವ ಡಾ.ಕೆ.ಸುಧಾಕರ್. ಬೆಂಗಳೂರು,ಡಿಸೆಂಬರ್,28,2021(..):ಒಮಿಕ್ರಾನ್ ಹೆಚ್ಚುತ್ತಿರುವ ಹಿನ್ನೆಲೆ ಇಂದಿನಿಂದ ರಾಜ್ಯದಲ್ಲಿ 10 ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿಯಾಗುತ್ತಿದ್ದು ಜನರು ಸಹಕರಿಸುವಂತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ನೈಟ್ ಕರ್ಫ್ಯೂ ಅನ್ನು ವಿನಾಕಾರಣ ವಿರೋಧ ಮಾಡೋದು ಸರಿಯಲ್ಲ. ಜನರು ಮಾರ್ಗಸೂಚಿ ಪಾಲಿಸಿ ಸಹಕಾರ ನೀಡಬೇಕು. ಸರ್ಕಾರ ಸಾಧಕ ಬಾಧಕ ನೋಡಿ ನಿರ್ಧಾರ ಮಾಡಿದೆ. ಸದ್ಯ 10 ದಿನಕ್ಕೆ ನೈಟ್ ಕರ್ಫ್ಯೂ ಜಾರಿ ಇರುತ್ತೆ . ಸ್ಥಿತಿಗತಿ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. ಕಾಲ ಕಾಲಕ್ಕೆ ಸಂಬಂಧ ಪಟ್ಟ ಅಧಿಕಾರಿಗಳ ಜತೆ ಚರ್ಚಿಸುತ್ತೇವೆ. ಚರ್ಚಿಸಿದ ಬಳಿಕ ಕ್ರಮ ಕೈಗೊಳ್ಳುತ್ತೇವೆ. ಜನರು ಸಹಕಾರ ನೀಡಬೇಕು ಎಂದರು. ಮಕ್ಕಳಿಗೂ ಕೋವಿಡ್ ಲಸಿಕೆ ನೀಡುವ ಕುರಿತು ಪ್ರತಿಕ್ರಿಯಿಸಿದ ಸಚಿವ ಡಾ.ಕೆ ಸುಧಾಕರ್, ನಮ್ಮಲ್ಲಿ ಕೋವ್ಯಾಕ್ಸಿನ್ ಲಸಿಕೆ ಹೆಚ್ಚು ಇಲ್ಲ. ಹೀಗಾಗಿ ಕೇಂದ್ರದ ಬಳಿ ಬೇಡಿಕೆ ಇಡುತ್ತೇವೆ . ರಾಜ್ಯದಲ್ಲಿ 43 ಲಕ್ಷ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ಅಗತ್ಯವಿದೆ ಎಂದರು. : 10 - - - – - -. . . … 10 : . . , 28, 2021 (..): , . . . . , . . . “ . . 10 . ,” .“ ,” . . 43 .: . . / -19/ /