ಸಾಲ ಬಾಧೆ ತಾಳಲಾರದೆ ರೈತ ಮಹಿಳೆ ಆತ್ಮಹತ್ಯೆಗೆ ಶರಣು. ಮೈಸೂರು,ಡಿಸೆಂಬರ್,27,2021(..):ಸಾಲ ಬಾಧೆ ತಾಳಲಾರದೆ ರೈತ ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ. ಕೆ.ಆರ್.ನಗರ ತಾಲೂಕಿನ ಸಾಲೇಕೊಪ್ಪಲು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ ಎಸ್.ಆರ್.ಸುಕನ್ಯ (55) ಆತ್ಮಹತ್ಯೆಗೆ ಶರಣಾದ ರೈತ ಮಹಿಳೆ. ಸುಕನ್ಯ ಹೊಸೂರು ಸಹಕಾರ ಸಂಘದಲ್ಲಿ 60 ಸಾವಿರ ಕೈ ಸಾಲವಾಗಿ 5 ಲಕ್ಷದಷ್ಟು ಸಾಲ ಮಾಡಿಕೊಂಡಿದ್ದರು. ಒಂದು ಎಕರೆ 39 ಗುಂಟೆ ಜಮೀನು ಹೊಂದಿದ್ಧ ರೈತ ಮಹಿಳೆ ಸುಕನ್ಯ ತರಕಾರಿ,ಶುಂಠಿ, ಭತ್ತದ ಬೆಳೆಗಳನ್ನ ಬೆಳೆದಿದ್ದರು. ಆದರೆ ಬೆಳೆಗಳು ಕೈ ಕೊಟ್ಟ ಪರಿಣಾಮವಾಗಿ ಸುಕನ್ಯ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಕುರಿತು ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : –- –- – .