ಎಸ್ ಪಿ ಕಚೇರಿ ಆವರಣದಲ್ಲಿ ಪತ್ನಿಗೆ ಚಾಕು ಇರಿದ ಕಾನ್ಸ್ ಟೇಬಲ್: ಚಿಕಿತ್ಸೆ ಫಲಿಸದೆ ಸಾವು ಹಾಸನ ,ಜುಲೈ,1,2024 (..):ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿಗೆ ಪೊಲೀಸ್ ಕಾನ್ಸ್ ಟೇಬಲ್ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಹಾಸನ ಎಸ್.ಪಿ ಕಚೇರಿ ಆವರಣದಲ್ಲಿ ನಡೆದಿದೆ. ಮಮತಾ ಚಾಕುವಿನಿಂದ ಇರಿತಕ್ಕೊಳಗಾಗಿ ಮೃತಪಟ್ಟ ಪತ್ನಿ. ಲೋಕನಾಥ್ ಎಂಬಾತನೇ ಪತ್ನಿಯನ್ನ ಹತ್ಯೆಗೈದ ಪೊಲೀಸ್ ಕಾನ್ಸ್ ಟೇಬಲ್. ಲೋಕನಾಥ್ ಶಾಂತಿ ಗ್ರಾಮ ಪೊಲೀಸ್ ಠಾಣೆಯಲ್ಲಿ ಕಾನ್ಸ್ ಟೇಬಲ್ ಆಗಿದ್ದು ದಂಪತಿ ನಡುವೆ ಕೌಟುಂಬಿಕ ಕಲಹವಿತ್ತು ಎನ್ನಲಾಗಿದೆ. ಹೀಗಾಗಿ ಪತ್ನಿ ಮಮತಾ ಇಂದು ದೂರು ನೀಡಲು ಎಸ್ ಪಿ ಕಚೇರಿಗೆ ಆಗಮಿಸಿದ್ದರು. ಈ ವೇಳೆ ಲೋಕನಾಥ್ ಪತ್ನಿಗೆ ಚಾಕುವಿನಿಂದ ಇರಿದಿದ್ದು, ತಕ್ಷಣ ಮಮತಾರನ್ನ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಚಿಕಿತ್ಸೆ ಫಲಿಸದೆ ಮಮತಾ ಸಾವನ್ನಪ್ಪಿದ್ದು ಇದಿಗ ಪತಿ ಕಾನ್ಸ್ ಟೇಬಲ್ ಲೋಕನಾಥ್ ನನ್ನು ಪೊಲೀಸರು ಬಂಧಿಸಿದ್ದಾರೆ. : , , ,