2023ರವರೆಗೂ ಬೊಮ್ಮಾಯಿ ಅವರೇ ಸಿಎಂ- ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್. ಬೆಂಗಳೂರು,ಡಿಸೆಂಬರ್,25,2021(..):ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್ ನವರೇ ಸಿಎಂ ಬದಲಾವಣೆ ಸುದ್ಧಿ ಹರಡಿಸಿರಬಹುದು. ಆದರೆ ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ನಳೀನ್ ಕುಮಾರ್ ಕಟೀಲ್, ಸಿಎಂ ಬದಲಾವಣೆ ಕಪೋಕಲ್ಪಿತ. 2023ರವರೆಗೆ ಬಸವರಾಜ ಬೊಮ್ಮಾಯಿ ಅವರೇ ಸಿಎಂ. ಯಾವುದೇ ಕಾರಣಕ್ಕೆ ಸಿಎಂ ಬದಲಾವಣೆ ಇಲ್ಲ. ಅರಾಜಕತೆ ಸೃಷ್ಟಿಸಲು ಈ ರೀತಿ ಸುದ್ಧಿ ಹರಡಿಸುತ್ತಾರೆ. ಕಾಂಗ್ರೆಸ್ ನವರೇ ಸುದ್ದಿ ಹರಡಿಸಿರಬಹುದು ಎಂದರು. ಸಿಎಂ ಬೊಮ್ಮಾಯಿಗೆ ಕಾಲುನೋವು ಮಾತ್ರ ಇದೆ. ಅವರು ವಿದೇಶಕ್ಕೂ ಹೋಗಲ್ಲ. ಸಿಎಂ ಬೊಮ್ಮಾಯಿ ಇಲ್ಲೇ ಇದ್ದು ಚಿಕಿತ್ಸೆ ಪಡೆಯುತ್ತಾರೆ ಎಂದರು. ಇನ್ನು ಸಚಿವ ಸಂಪುಟ ವಿಸ್ತರಣೆ ವಿಚಾರ, ಸಚಿವ ಸಂಪುಟ ವಿಸ್ತರಣೆ ಸಿಎಂಗೆ ಬಿಟ್ಟ ವಿಚಾರ. ಸಂಪುಟ ಪುನರಚನೆಯಾದರೇ ನಮ್ಮ ಜತೆ ಚರ್ಚಿಸುತ್ತಾರೆ ಎಂದು ನಳೀನ್ ಕುಮಾರ್ ಕಟೀಲ್ ತಿಳಿಸಿದರು. : – - 2023- - .