ಮುಡಾದಿಂದ ಮುಂದುವರೆದ ಕಾರ್ಯಾಚರಣೆ: ಬರೊಬ್ಬರಿ 170 ಕೋಟಿ ರೂ. ಮೌಲ್ಯದ ಸ್ವತ್ತು ವಶಕ್ಕೆ. ಮೈಸೂರು,ಡಿಸೆಂಬರ್,24,2021(..):ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಕಾರ್ಯಾಚರಣೆ ಮುಂದುವರೆದಿದ್ದು, ಬರೊಬ್ಬರಿ 170 ಕೋಟಿ ರೂ. ಮೌಲ್ಯದ ಒಟ್ಟು 163 ನಿವೇಶನವನ್ನ ಮುಡಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಮೈಸೂರು ತಾಲ್ಲೂಕು ಕಸಬಾ ಹೋಬಳಿ ಬಸವನಹಳ್ಳಿ ಗ್ರಾಮ, ವಿಜಯನಗರ 4ನೇ ಹಂತದಲ್ಲಿ ಮುಡಾ ಕಾರ್ಯಾಚರಣೆ ನಡೆಸಿ 30×40 ಅಳತೆಯ 19 ನಿವೇಶನ, 20×30 64 ನಿವೇಶನ, 40×60 ಅಳತೆಯ 35 ನಿವೇಶನ ಹಾಗೂ ಅನಿಮಿಯತ ಅಳತೆಯ 45 ನಿವೇಶನ ಸೇರಿದಂತೆ ಒಟ್ಟು 163 ನಿವೇಶನ ಸ್ವತ್ತು ವಶ ಪಡೆದಿದೆ. ಮುಡಾ ಆಯುಕ್ತ ಡಿ.ಬಿ ನಟೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಇತ್ತೀಚೆಗಷ್ಟೇ ಮುಡಾ ನೂರು ಕೋಟಿ ಮೌಲ್ಯದ ಜಮೀನನ್ನ ವಶಕ್ಕೆ ಪಡೆದಿತ್ತು. : - –-170 - - -.