4 ವರ್ಷದ ಬಳಿಕ ದಚ್ಚು ಜತೆ ರಚ್ಚು! ‘ಕ್ರಾಂತಿ’ ಕುರಿತು ರಚಿತಾ ಮಾತು! ಬೆಂಗಳೂರು, ಡಿಸೆಂಬರ್ 24, 2021 (..):4 ವರ್ಷದ ಬಳಿಕ ಮತ್ತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಡಿಂಪಲ್ ಕ್ವೀನ್ ರಚಿತಾ ‘ಕ್ರಾಂತಿ’ಯಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ವಿ. ಹರಿಕೃಷ್ಣ ನಿರ್ದೇಶನದಲ್ಲಿ ಚಾಲೆಂಜಿಂಗ್ ಸ್ಟಾರ್ ಬಣ್ಣ ಹಚ್ಚಿ ಅಭಿನಯಿಸುತ್ತಿದ್ದು, ಇದರಲ್ಲಿ ಈ ಸಕ್ಸಸ್ ಜೋಡಿ ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದೆ. ಈ ಜೋಡಿಯನ್ನು ತೆರೆ ಮೇಲೆ ಒಟ್ಟಿಗೆ ಕಾಣಲು ಅಭಿಮಾನಿಗಳೂ ಎದುರು ನೋಡುತ್ತಿದ್ದಾರೆ. ಶೂಟಿಂಗ್ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ರಚಿತಾ ಕ್ರಾಂತಿ ಸಿನಿಮಾದ ಬಗ್ಗೆ ಮಾತಾಡಿದ್ದಾರೆ. ನಾಲ್ಕೈದು ವರ್ಷದ ಬಳಿಕ ನಾನು ದರ್ಶನ್ ಸರ್ ಅವರೊಂದಿಗೆ ನಟಿಸುತ್ತಿದ್ದೇನೆ. ಆ ಖುಷಿಯನ್ನು ಹೇಳಲು ಅಸಾಧ್ಯ ಎಂದಿದ್ದಾರೆ ರಚಿತಾ.