ಮತಾಂತರ ನಿಷೇಧ ವಿಧೇಯಕಕ್ಕೆ ಆರ್ ಎಸ್ ಎಸ್ ಸಹಕಾರವೂ ಇದೆ- ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ. ಬೆಳಗಾವಿ,ಡಿಸೆಂಬರ್,23,2021(..):ವಿಪಕ್ಷಗಳ ವಿರೋಧದ ನಡುವೆ ರಾಜ್ಯ ವಿಧಾನಸಭೆಯಲ್ಲಿ ಮತಾಂತರ ನಿಷೇಧ ಕಾಯ್ದೆ ಅಂಗೀಕಾರವಾಗಿದ್ದು ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ವಿಧೇಯಕಕ್ಕೆ ಆರ್ ಎಸ್ ಎಸ್ ಸಹಕಾರವೂ ಇದೆ ಎಂದಿದ್ದಾರೆ. ಈ ಕುರಿತು ಸುವರ್ಣಸೌಧದಲ್ಲಿ ಮಾತನಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಮತಾಂತರ ನಿಷೇಧ ವಿಧೇಯಕವನ್ನ ವಿಧಾಸಭೆಯಲ್ಲಿ ನಾವು ಒಗ್ಗಟ್ಟಾಗಿ ಅಂಗೀಕರಿಸಿದ್ದೇವೆ. ನಾನು ಆರ್ ಎಸ್ ಎಸ್. ಪ್ರಧಾನಿ ಮೋದಿಯೂ ಆರ್ ಎಸ್ ಆರ್. ಆರ್ ಎಸ್ ಎಸ್ ನಿಂದ ಬಂದವರು ಎಂದು ಹೇಳಿಕೊಳ್ಳಲು ಹೆಮ್ಮೆಯಿದೆ. ಮತಾಂತರ ನಿಷೇಧ ವಿಧೇಯಕಕ್ಕೆ ಆರ್ ಎಸ್ ಎಸ್ ಸಹಕಾರವಿದೆ ಎಂದಿದ್ದಾರೆ. : - – - -