ಡಿ.31ರ ಕರ್ನಾಟಕ ಬಂದ್ ಗೆ ವೈಯಕ್ತಿಕ ಬೆಂಬಲ ಇದೆ ಎಂದ ಸಚಿವ ಕೆ.ಎಸ್ ಈಶ್ವರಪ್ಪ. ಬೆಳಗಾವಿ,ಡಿಸೆಂಬರ್,22,2021(..): ಎಂಇಎಸ್ ಪುಂಡಾಟಿಕೆ ಖಂಡಿಸಿ ಎಂಇಎಸ್ ನಿಷೇಧಿಸುವಂತೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಡಿಸೆಂಬರ್ 31ಕ್ಕೆ ಕರೆ ನೀಡಿರುವ ಕರ್ನಾಟಕ ಬಂದ್ ಗೆ ವೈಯಕ್ತಿಕ ಬೆಂಬಲ ಇದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ. ಈ ಕುರಿತು ಮಾತನಾಡಿರುವ ಸಚಿವ ಕೆ.ಎಸ್ ಈಶ್ವರಪ್ಪ, ಕರ್ನಾಟಕ ಬಂದ್‌ ಗೆ ನನ್ನ ವೈಯಕ್ತಿಕ ಬೆಂಬಲ ಇದೆ. ಎಂಇಎಸ್ ಪುಂಡಾಟಿಕೆ ವಿರುದ್ಧ ಖಂಡನಾ ನಿರ್ಣಯವಾಗಿದೆ. ಖಂಡನಾ ನಿರ್ಣಯವನ್ನು ಕೇಂದ್ರಕ್ಕೂ ಕಳಿಸಲಾಗಿದೆ. ಕೇಂದ್ರ ಯಾವ ಕ್ರಮ ತೆಗೆದುಕೊಳ್ಳುತ್ತೋ ನೋಡೋಣ ಎಂದು ತಿಳಿಸಿದರು. ಹಾಗೆಯೇ ಬಂದ್ ಬಗ್ಗೆ ಪ್ರತಿಕ್ರಿಯಿಸಿದ ಕಂದಾಯ ಸಚಿವ ಆರ್.ಅಶೋಕ್, ಪುಂಡರ ಮೇಲೆ ಕ್ರಮ ಕೈಗೊಂಡಿದ್ದೇವೆ ಎಂಇಎಸ್ ಒಂದು ಪೊಲಿಟಿಕಲ್ ಪಾರ್ಟಿ. ಬ್ಯಾನ್ ಮಾಡಬೇಕಾದ್ರೆ ಕಾನೂನು ಇದೆ. ಹೀಗಾಗಿ ಪ್ರತಿಭಟನೆ ಬಂದ್ ಮಾಡಬೇಡಿ ಎಂದು ಮನವಿ ಮಾಡಿದರು. ಮತ್ತೊಂದೆಡೆ, ಕರ್ನಾಟಕ ಬಂದ್ ​ಗೆ ಕರೆ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. : - – –- -.