ಮೈಸೂರು ವಿವಿ ಹಿರಿಯ ವಿದ್ಯಾರ್ಥಿ ಸಂಘಕ್ಕೆ ನೂತನವಾಗಿ ಕಾರ್ಯಕಾರಿ ಸಮಿತಿ ರಚನೆ ಮೈಸೂರು,ಡಿಸೆಂಬರ್,22,2021(..):ಮೈಸೂರು ವಿಶ್ವವಿದ್ಯಾನಿಲಯದ ಹಿರಿಯ ವಿದ್ಯಾರ್ಥಿ ಸಂಘಕ್ಕೆ ನೂತನವಾಗಿ ಕಾರ್ಯಕಾರಿ ಸಮಿತಿಯನ್ನು ಸರ್ವಸದಸ್ಯರ ಸಭೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ವಿವಿಯಲ್ಲಿ ಓದಿ ದೇಶ-ವಿದೇಶಗಳಲ್ಲಿ ಚದುರಿ ಹೋಗಿರುವ ಹಿರಿಯ ವಿದ್ಯಾರ್ಥಿಗಳು ಒಟ್ಟುಗೂಡಿ ತಮಗೆ ಬದುಕು ನೀಡಿದ ವಿಶ್ವದ್ಯಾನಿಲಯಕ್ಕೆ ಏನಾದರೂ ಋಣ ಸಂದಾಯ ಮಾಡುವ ನಿಟ್ಟಿನಲ್ಲಿ ಸ್ಥಾಪಿತವಾದ ಸಂಸ್ಥೆಯೇ ಮೈಸೂರು ವಿಶ್ವದ್ಯಾನಿಲಯ ಹಿರಿಯ ವಿದ್ಯಾರ್ಥಿಗಳ ಸಂಘ. ಮೈಸೂರು ವಿಶ್ವದ್ಯಾನಿಲಯದ ಗ್ರಾಮೀಣ ವಿದ್ಯಾರ್ಥಿಗಳಿಗೆ, ಬಡ ಕುಟುಂದಿಂದ ಬಂದ ವಿದ್ಯಾರ್ಥಿಗಳಿಗೆ ಸ್ಕಾಲರ್‌ ಶಿಪ್ ನೀಡಿ, ಸಂಶೋಧಕರಿಗೆ ಧನ ಸಹಾಯ ಮಾಡುತ್ತಾ, ಬೋಧಕ, ಬೋಧಕೇತರ ಸಿಬ್ಬಂಧಿಗೆ ಸಹಾಯ ಹಸ್ತ ಚಾಚುವ ಮೂಲಕ ವಿಶ್ವದ್ಯಾನಿಲಯದ ಜೊತೆ ಕೈಜೋಡಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ. ಈ ಗುರಿಯ ಸಲತೆಗಾಗಿ ಈ ಕೆಳಕಂಡ ಕಾರ್ಯಕಾರಿ ಸಮಿತಿಯನ್ನು ನೂತನವಾಗಿ ಆಯ್ಕೆ ಮಾಡಲಾಗಿದೆ ಎಂದು ಮೈವಿವಿ ಹಿರಿಯ ವಿದ್ಯಾರ್ಥಿ ಸಂಘಧ ಅಧ್ಯಕ್ಷ ಪ್ರೊ. ಎಸ್.ಎನ್. ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನೂತನ ಚುನಾಯಿತ ಕಾರ್ಯಕಾರಿ ಆಡಳಿತ ಮಂಡಳಿ: ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ – ಮುಖ್ಯ ಮಹಾ ಪೋಷಕರು. ಪ್ರೊ. ಜಿ. ಹೇಮಂತ್ ಕುಮಾರ್- ಮೈಸೂರು ವಿವಿ ಕುಲಪತಿಗಳು, ಪದನಿಮಿತ್ತ ಅಧ್ಯಕ್ಷರು. ಪ್ರೊ. ಎಸ್.ಎನ್. ಹೆಗ್ಡೆ- ಅಧ್ಯಕ್ಷರು. ಪ್ರೊ. ಕೆ.ಎಸ್. ರಂಗಪ್ಪ- ಉಪಾಧ್ಯಕ್ಷರು. ಪ್ರೊ. ಎಸ್.ಆರ್. ನಿರಂಜನ-ಉಪಾಧ್ಯಕ್ಷರು. ಪ್ರೊ. ಎಸ್. ಶ್ರೀಕಂಠಸ್ವಾಮಿ- ಕಾರ್ಯದರ್ಶಿಗಳು. ಪ್ರೊ. ಕೆ.ಎನ್. ಅಮೃತೇಶ್- ಜಂಟಿ ಕಾರ್ಯದರ್ಶಿಗಳು. ನಂದಿನಿ ಮೂರ್ತಿ- ಕೋಶಾಧ್ಯಕ್ಷರು. ನೂತನ ಚುನಾಯಿತ ಕಾರ್ಯಕಾರಿ ಮಂಡಳಿ ಸದಸ್ಯರು: ಪ್ರೊ. ಎನ್.ಎಸ್ ರಾಮೇಗೌಡ, ಪ್ರೊ. ಬಿ.ಕೆ. ಜಗದೀಶ, ಪ್ರೊ. ಸಿ. ನಾಗಣ್ಣ, ರವಿಕುಮಾರ್ ಜೋಶಿ, ಡಾ. ಕೃಷ್ಣಮೂರ್ತಿ ಚಮರಂ, ಪ್ರೊ. ಸುತ್ತೂರು ಎಸ್. ಮಾಲಿನಿ, ಡಾ. ಸಿ.ಡಿ.ಶ್ರೀನಿವಾಸ ಮೂರ್ತಿ. ಅಧ್ಯಕ್ಷರ ನಾಮ ನಿರ್ದೇಶಿತ ನೂತನ ಸದಸ್ಯರುಗಳು: ಅಬ್ಬಾಸ್ ಸಾಲೇಭಾಯ್ ವಾಘ್, ಪ್ರೊ. ಎಸ್. ಸತೀಶ್, ಡಾ. ಎಂ.ಪಿ. ಸದಾಶಿವ. ವಿಶೇಷ ಆಹ್ವಾನಿತ ಸದಸ್ಯರು: ಪಿ. ಗಂಗಾಧರ ಗೌಡ. : – - - - … , 22, 2021 (..): , . , . , , , - . , . .. . : – , . . – -, .. .. – , . .. – -, . .. – -, . . – , . .. – , – : . .. , . .. , . ., , . , . . , . .. . : , . . , . .. . : . : / / / /