ಕಳ್ಳತನದಿಂದ ಮತಾಂತರ ನಿಷೇಧ ಕಾಯ್ದೆ ಮಂಡನೆ ಎಂಬ ಸಿದ್ಧರಾಮಯ್ಯ ಆರೋಪಕ್ಕೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿರುಗೇಟು. ಬೆಳಗಾವಿ,ಡಿಸೆಂಬರ್,22,2021(..):ಕಳ್ಳತನದಿಂದ ವಿಧಾನಸಭೆಯಲ್ಲಿ ಮತಾಂತರ ನಿಷೇಧ ಕಾಯ್ದೆ ಮಂಡನೆ ಮಾಡಲಾಗಿದೆ ಎಂದು ಆರೋಪಿಸಿದ ವಿಪಕ್ಷ ನಾಯಕ ಸಿದ್ಧರಾಮಯ್ಯಗೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ತಿರುಗೇಟು ನೀಡಿದ್ದಾರೆ. ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಕಳ್ಳತನದಿಂದ ಅಲ್ಲ ರಾಜಮಾರ್ಗದಿಂದ ಕಾಯ್ದೆ ಮಂಡನೆ ಮಾಡಲಾಗಿದೆ.ವಿಧಾನಸಭೆಯಲ್ಲಿ ಕಾಯ್ದೆ ಮಂಡನೆಯಾಗಿದೆ, ಜಾರಿಗೆ ತಂದಿದ್ದೇವೆ ಸಿದ್ಧರಾಮಯ್ಯ ಜೆಡಿಎಸ್ ಕಾಯ್ದೆ ಬೆಂಬಲಿಸಬೇಕು. ರಾಜಕೀಯ ಇಚ್ಛಾಶಕ್ತಿಗೆ ಇದನ್ನ ಬಳಸಬಾರದು ಎಂದು ಹೇಳಿದರು. ನಿನ್ನೆ ವಿಧಾನಸಭೆಯಲ್ಲಿ ರಾಜ್ಯ ಆಡಳಿತರೂಢ ಬಿಜೆಪಿ ಸರ್ಕಾರ ಮತಾಂತರ ನಿಷೇಧ ಕಾಯ್ದೆ ಮಂಡನೆ ಮಾಡಿದ್ದು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ಧ ವಿಪಕ್ಷ ನಾಯಕ ಸಿದ್ಧರಾಮಯ್ಯ, ಬಿಜೆಪಿ ಸರ್ಕಾರ ಕಳ್ಳತನದಿಂದ ಕಾಯ್ದೆ ಮಂಡನೆ ಮಾಡಿದೆ ಎಂದಿದ್ದರು. : - – - – –