ಸಿದ್ದರಾಮಯ್ಯ ಯೋಗ್ಯರಿದ್ದರೇ ಅವರನ್ನೇ ಸಿಎಂ ಸ್ಥಾನದಲ್ಲಿ ಮುಂದುವರೆಸಿ- ರಂಬಾಪುರಿ ಶ್ರೀಗಳು ಕಲ್ಬುರ್ಗಿ,ಜೂನ್,29,2024 (..):ಡಿಸಿಎಂ ಡಿಕೆ ಶಿವಕುಮಾರ್ ಗೆ ಸಿಎಂ ಸ್ಥಾನ ನೀಡುವಂತೆ ಚಂದ್ರ ಶೇಖರ ಸ್ವಾಮೀಜಿ ಹೇಳಿಕೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಬಾಳೇಹೊನ್ನೂರು ಮಠದ ರಂಭಾಪುರಿ ಪೀಠದ ಜಗದ್ಗುರುಗಳು, ಸಿಎಂ ಬದಲಾಯಿಸಿದ್ರೆ ಲಿಂಗಾಯಿತ ಸಮುದಾಯಕ್ಕೆ ನೀಡಿ. ಇಲ್ಲದಿದ್ದರೇ ಸಿದ್ದರಾಮಯ್ಯ ಯೋಗ್ಯರಿದ್ದರೇ ಅವರನ್ನೇ ಸಿಎಂ ಸ್ಥಾನದಲ್ಲಿ ಮುಂದುವರೆಸಿ ಎಂದು ಹೇಳಿಕೆ ನೀಡಿದ್ದಾರೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ರಂಭಾಪುರಿ ಶ್ರೀಗಳು, ಒಕ್ಕಲಿಗ ಸಮುದಾಯದ ಚಂದ್ರಶೇಖರಶ್ರೀ ಸಿಎಂ ಸಮ್ಮುಖದಲ್ಲೇ ಸಿಎಂ ಬದಲಾವಣೆ ಬಗ್ಗೆ ಮಾತನಾಡಿದ್ದು ವಿಪರ್ಯಾಸ. ಸಿಎಂ ಬದಲಾಯಿಸೋದಾದ್ರೆ ಲಿಂಗಾಯತ ಸಮುದಾಯಕ್ಕೆ ನೀಡಬೇಕು. ಇಲ್ಲ ಡಿಸಿಎಂ ಸ್ಥಾನನಾದರೂ ನೀಡಬೇಕು. ‘ಸಿಎಂ ಸ್ಥಾನ ನೀಡಲು ಅಗದಿದ್ದರೇ ಉಪಮುಖ್ಯಮಂತ್ರಿ ಆದರೂ ಮಾಡಬೇಕು ಎಂದು ಆಗ್ರಹಿಸಿದರು. ಕಾಂಗ್ರೆಸ್ ಹೈಕಮಾಂಡ್ ಇಂತಹ ಬೆಳವಣಿಗೆಗೆ ಕಡಿವಾಣ ಹಾಕಬೇಕು, ಇಲ್ಲದಿದ್ದರೇ ಸರ್ಕಾರದ ಆಡಳಿತದ ಮೇಲೆ ಪರಿಣಾಮ ಬೀರುತ್ತದೆ. ಸಿದ್ದರಾಮಯ್ಯ ಅವರು ಯೋಗ್ಯರಿದ್ದರೆ ಸಿಎಂ ಸ್ಥಾನದಲ್ಲಿ ಅವರನ್ನೇ ಮುಂದುವರಿಸಿ ಎಂದು ರಂಭಾಪುರಿ ಶ್ರೀಗಳು ಸಲಹೆ ನೀಡಿದರು. : , , ,