ಪಟಾಕಿ ರವಿ ಎಂದು ವ್ಯಂಗ್ಯವಾಡಿದ ಡಿ.ಕೆ ಶಿವಕುಮಾರ್ ಗೆ ತಿರುಗೇಟು ನೀಡಿದ ಮಾಜಿ ಸಚಿವ ಸಿ.ಟಿ ರವಿ. ಚಿಕ್ಕಮಗಳೂರು,ಡಿಸೆಂಬರ್,21,2021(..):ತಮ್ಮನ್ನು ಪಟಾಕಿ ರವಿ ಎಂದು ಲೇವಡಿ ಮಾಡಿದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ತಿರುಗೇಟು ನೀಡಿದ್ದಾರೆ. ಈ ಹೇಳಿಕೆ ಕುರಿತು ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯಿಸಿದ ಮಾಜಿ ಸಚಿವ ಸಿ.ಟಿ ರವಿ, ಪಟಾಕಿಯನ್ನ ಶುಭಕಾರ್ಯಕ್ಕೆ ಹಚ್ಚಿ ಸ್ವಾಗತಿಸುತ್ತಾರೆ. ಬೆಂಕಿ ಹಚ್ಚುವ ಜಾಯಮಾನಕ್ಕೆ ನಾನು ಸೇರಿದವನಲ್ಲ. ಊರಿಗೆ ಬೆಂಕಿ ಹಚ್ಚಿ ಇದ್ದಿಲು ಮಾರಿದ್ರೆ ಎಷ್ಟು ಲಾಭವಾಗುತ್ತೆ. ಈ ರೀತಿ ಲೆಕ್ಕ ಹಾಕುವ ಮನಸ್ಥಿತಿ ಉಳ್ಳುವರು ಕಾಂಗ್ರೆಸ್ ನವರು. ಹೀಗಾಗಿ ಕನ್ನಡಿಗರು ಮತ್ತು ಮರಾಠಿಗರ ನಡುವೆ ಸಂಘರ್ಷವನ್ನುಂಟು ಮಾಡುತ್ತಿದ್ದಾರೆ. ತುಕಡೆ ಗ್ಯಾಂಗ್ ನವರು ಕಾಂಗ್ರೆಸ್ ನಲ್ಲಿ ಸೇರಿಕೊಂಡಿದ್ದಾರೆ ಎಂದು ಸಿಟಿ ರವಿ ಲೇವಡಿ ಮಾಡಿದರು. : - - --