ಕೆಎಸ್ ಒಯು ಕುಲಪತಿ ವಿರುದ್ಧ ಕೊಲೆ ಬೆದರಿಕೆ ಆರೋಪ: ದೂರು ಪ್ರತಿದೂರು ದಾಖಲು ಮೈಸೂರು,ಡಿಸೆಂಬರ್,20,2021(..):ಕರಾಮುವಿಯಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಶಂಕೆಯಿದ್ದು, ಕೆಲ ದಾಖಲೆಗಳನ್ನು ಕೇಳಲು ಹೋದ ನನಗೆ ಕುಲಪತಿ ವಿದ್ಯಾಶಂಕರ್ ಅವರು ಜೀವ ಬೆದರಿಕೆ ಹಾಕಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ವರುಣಾ ಮಹೇಶ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಮಧ್ಯೆ ಕರಾಮುವಿಯ ಅಧಿಕಾರಿಗಳೂ ಸಹ ವರುಣಾ ಮಹೇಶ್ ವಿರುದ್ಧ ಪ್ರತಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ದೂರು ನೀಡಿರುವ ವರುಣಾ ಮಹೇಶ್, ಮುಕ್ತ ವಿವಿಯಲ್ಲಿ ಭ್ರಷ್ಟಾಚಾರ ಪ್ರಕರಣಗಳು ನಡೆದಿದ್ದು, ಈ ಸಂಬಂಧ ಡಿ.16ರಂದು ನಾನು ಕುಲಪತಿಗಳನ್ನು ಭೇಟಿ ಮಾಡಿ ಮಾಹಿತಿ ನೀಡುವಂತೆ ಕೋರಿದ್ದೆ. ಆದರೆ, ಅವರು ನನ್ನನ್ನು ಅಲ್ಲಿ ಕೂರಲೂ ಬಿಡದೆ ಎದ್ದು ಹೋಗುವಂತೆ ಹೇಳಿದ್ದಲ್ಲದೆ, ನಿನ್ನನ್ನು ಏನು ಮಾಡಬೇಕು ಗೊತ್ತು ಎಂದು ಧಮ ಹಾಕಿದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ನಂತರ ಡಿ.17ರಂದು ನಾನು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ದಾಖಲೆಗಳನ್ನು ಕೇಳಿ ಅರ್ಜಿ ಸಲ್ಲಿಸಿದ್ದೆ. ಅದನ್ನು ತಿಳಿದ ಅವರು ಅನ್ಯರೊಡನೆ ಸೇರಿ ಅವರ ಮೂಲಕ ನನಗೆ ಬೆದರಿಕೆ ಹಾಕಿಸುತ್ತಿದ್ದಾರೆ. ಹೀಗಾಗಿ ಕುಲಪತಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಹಾಗೂ ನನಗೆ ರಕ್ಷಣೆ ನೀಡಬೇಕು ಎಂದು ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ನಡುವೆ ಮುಕ್ತ ವಿವಿ ಕುಲ ಸಚಿವ ಆರ್.ರಾಜಣ್ಣ ಅವರೂ ವರುಣಾ ಮಹೇಶ್ ಮೇಲೆ ಪ್ರತಿ ದೂರು ಸಲ್ಲಿಸಿದ್ದಾರೆ, ವರುಣಾ ಮಹೇಶ್ ಅವರು ಯಾವುದೇ ಪೂರ್ವಾನುಮತಿ ಇಲ್ಲದೆ ಕುಲಪತಿ ಕಚೇರಿಗೆ ನುಗ್ಗಿ ಅವರನ್ನು ನಿಂದಿಸಿದ್ದಲ್ಲದೆ ಕೊಲೆ ಬೆದರಿಕೆ ಒಡ್ಡಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಿದ್ದಾರೆ. : -- - – .. , 20, 2021 (..): () - , ., - . . “ 16, . . .” 17, . , . . , . - . , ’ .: / / / / /