ಎಂಇಎಸ್, ಶಿವಸೇನೆ ವಿರುದ್ಧ ಪ್ರತಿಭಟನೆ: ಕರವೇ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರನ್ನ ವಶಕ್ಕೆ ಪಡೆದ ಪೊಲೀಸರು. ಬೆಳಗಾವಿ,ಡಿಸೆಂಬರ್,20,2021(..):ಬೆಳಗಾವಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಹಾನಿ ಮಾಡಿ ಪುಂಡಾಟಿಕೆ ಮೆರೆದಿರುವ ಎಂಇಎಸ್ ಹಾಗೂ ಶಿವಸೇನೆ ವಿರುದ್ಧ ಕನ್ನಡಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು ಈ ನಡುವೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಎಂಇಎಸ್ ಮತ್ತು ಶಿವಸೇನೆ ಪುಂಡಾಟಿಕೆ ಖಂಡಿಸಿ ಹಿರೇಬಾಗೇವಾಡಿಯಿಂದ ಸುವರ್ಣ ಸೌಧದವರೆಗೆ ಬೆಳಗಾವಿ ಚಲೋ ನಡೆಸಲು ಮುಂದಾದ ಕರವೇ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರನ್ನ ಹಿರೇಬಾಗೇವಾಡಿ ಬಳಿಯೇ ತಡೆದ ಪೊಲೀಸರು ಅವರನ್ನ ವಶಕ್ಕೆ ಪಡೆದರು. ಈ ಬಗ್ಗೆ ಮಾತನಾಡಿದ ಪ್ರವೀಣ್ ಶೆಟ್ಟಿ, ಬುಧವಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಸಭೆ ಇದೆ. ಸಭೆಯಲ್ಲಿ ಮುಂದಿನ ಹೋರಾಟದ ಬಗ್ಗೆ ಚರ್ಚಿಸುತ್ತೇವೆ.ಎಂಇಎಸ್ ದೇಶದ್ರೋಹಿ ಸಂಘಟನೆ. ಅದನ್ನ ಬ್ಯಾನ್ ಮಾಡಲೇಬೇಕು ನಮ್ಮ ಮುಂದಿನ ಹೋರಾಟ ಉಗ್ರರೂಪದಲ್ಲಿ ಇರುತ್ತದೆ ಎಂದು ಹೇಳಿದರು. … , : , 20, 2021 (..): - . () , . ’ . . , , . “ . - . . ,” .: / / / : - –- –- -