ಮೈಸೂರಿನಲ್ಲಿ ನಂದಿನಿ ಹೆಸರಿನ‌ ನಕಲಿ ತುಪ್ಪ ತಯಾರಿಕಾ ಘಟಕ ಪತ್ತೆ. ಮೈಸೂರು,ಡಿಸೆಂಬರ್,16,2021(..):ಸಾಂಸ್ಕೃತಿಕ ನಗರಿ ಮೈಸೂರಿನ ಹೊರ ವಲಯದಲ್ಲಿ ನಂದಿನಿ ಹೆಸರಿನ‌ ನಕಲಿ ತುಪ್ಪ ತಯಾರಿಕಾ ಘಟಕ ಪತ್ತೆಯಾಗಿದೆ. ಚಾಮುಂಡಿಬೆಟ್ಟ ಹಿಂಭಾಗದ ಹೊಸಹುಂಡಿ ಗ್ರಾಮದಲ್ಲಿ ನಂದಿನಿ ಹೆಸರಿನ‌ ನಕಲಿ ತುಪ್ಪ ತಯಾರಿಕಾ ಘಟಕ ಪತ್ತೆಯಾಗಿದೆ. ನಂದಿನಿ ಲೇಬಲ್ ಗಳ ಮುದ್ರಣ ಘಟಕವೂ ಪತ್ತೆಯಾಗಿದ್ದು, ಟನ್ ಗಟ್ಟಲೆ ತುಪ್ಪ ಗೋಡೌನ್ ನಲ್ಲಿ ದಾಸ್ತಾನು ಮಾಡಲಾಗಿದೆ. ನಂದಿನಿ ತುಪ್ಪಕ್ಕೆ ಡಾಲ್ಡಾ ತುಪ್ಪೆ ಬೆರೆಸಿ ಮಾರಾಟ ಮಾಡುತ್ತಿದ್ದ ಜಾಲ ಇದಾಗಿದೆ. ನಂದಿನಿ ತುಪ್ಪ ಖರೀದಿ ಮಾಡುತ್ತಿದ್ದ ಚಂದ್ರುಈ ಜಾಲದ ರೂವಾರಿಯಾಗಿದ್ದು, ಜೀವನ್ ತುಪ್ಪ‌ ಕಂಪನಿಯವರಿಂದ ನಕಲಿ ಜಾಲ ಬಹಿರಂಗಗೊಂಡಿದೆ. ಸ್ಥಳಕ್ಕೆ ಮೈಮುಲ್ ಎಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೈಸೂರು ದಕ್ಷಿಣ ಗ್ರಾಮಾಂತರ ಪೊಲೀಸರು ಸಹ ಸ್ಥಳಕ್ಕೆ ಭೇಟಿ ನೀಡಿದ್ದಾರೆ. : -- – - –-