ಕಬಡ್ಡಿ… ಕಬಡ್ಡಿ… ಕಬಡ್ಡಿ… ! ಡಿಸೆಂಬರ್ 22ರಿಂದ ಪ್ರೊ ಕಬಡ್ಡಿ ಹವಾ ಶುರು ಬೆಂಗಳೂರು, ಡಿಸೆಂಬರ್ 16, 2021 (..):ಡಿಸೆಂಬರ್ 22ರಿಂದ ಬೆಂಗಳೂರಿನಲ್ಲಿ ಪ್ರೊ ಕಬಡ್ಡಿ ಟೂರ್ನಿಗೆ ಚಾಲನೆ ಸಿಗಲಿದೆ. 8ನೇ ಸೀಸನ್ ಪಂದ್ಯಾವಳಿಗೆ ಬೆಂಗಳೂರು ಬುಲ್ಸ್ ತಂಡ ಕೂಡ ಸಕಲ ರೀತಿಯಲ್ಲೂ ಸಜ್ಜಾಗಿದೆ. ಈ ಬಾರಿ ಬೆಂಗಳೂರು ಬುಲ್ಸ್​ ತಂಡವನ್ನು ಹಿರಿಯ ಆಟಗಾರ ಪವನ್ ಕುಮಾರ್ ಶೆಹ್ರಾವತ್ ಅವರು ಮುನ್ನಡೆಸಲಿದ್ದಾರೆ. ಪ್ರಮುಖ ಡಿಫೆಂಡರ್ ಮಹೇಂದರ್ ಸಿಂಗ್ ವೈಸ್ ಕ್ಯಾಪ್ಟನ್ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಬೆಂಗಳೂರು ಬುಲ್ಸ್ ಪರ ಪವನ್ ಶೆಹ್ರಾವತ್ ಅವರ ಪ್ರದರ್ಶನ ಅದ್ಭುತವಾಗಿದೆ. ಜತೆಗೆ ಈ ಬಾರಿ ಪೂರ್ಣಾವಧಿ ನಾಯಕನನ್ನಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಆ ಸೀಸನ್​ ಪವನ್ ಶೆಹ್ರಾವತ್ ಅದ್ಭುತ ಪ್ರದರ್ಶನ ನೀಡಿದ್ದರು. ಇನ್ನು ಕಳೆದ ಸೀಸನ್​ನಲ್ಲೂ ಟೂರ್ನಿಯ ಅತ್ಯಂತ ಯಶಸ್ವಿ ರೈಡರ್ ಎಂದು ಸಾಬೀತುಪಡಿಸಿದ್ದರು.