ಮೈಸೂರಿನಲ್ಲಿ ಗಂಧದ ಮರ ಸ್ಮಗ್ಲಿಂಗ್: ಇಬ್ಬರ ಬಂಧನ, ಕೋಟ್ಯಾಂತರ ಮೌಲ್ಯದ ಶ್ರೀಗಂಧ ವಶ. ಮೈಸೂರು,ಡಿಸೆಂಬರ್,15,2021(..):ಮೈಸೂರಿನಲ್ಲಿ ಗಂಧದ ಮರ ಸ್ಮಗ್ಲಿಂಗ್ ಗ್ಯಾಂಗ್ ಪತ್ತೆಯಾಗಿದ್ದು ಇದರಲ್ಲಿ ಭಾಗಿಯಾಗಿದ್ಧ ಇಬ್ಬರನ್ನ ಮೈಸೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತರಿಂದ 1 ಕೋಟಿ ಮೌಲ್ಯದ 700 ಕೆ ಜಿ ಶ್ರೀಗಂಧ, 15 ಸಾವಿರ ನಗದು 1 ಗೂಡ್ಸ್ ಆಟೋ 2 ಮೊಬೈಲ್ ಅನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಶ್ರೀಗಂಧವನ್ನ ಮೈಸೂರಿನಿಂದ ಬೆಂಗಳೂರಿಗೆ ಸಾಗಿಸುತ್ತಿದ್ದರು. ಇನ್ನು ಉಳಿದ ಆರೋಪಿಗಳಿಗಾಗಿ ಪೊಲೀಸರು ಶೋಧಕಾರ್ಯ ಮುಂದುವರೆಸಿದ್ದಾರೆ. : - – - –