ಪರಿಷತ್ ಚುನಾವಣೆ: ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣಗೆ ಭರ್ಜರಿ ಗೆಲುವು. ಹಾಸನ ಡಿಸೆಂಬರ್,14,2021(..):ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ನ 25 ಸ್ಥಾನಗಳೀಗೆ ನಡೆದ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದು ಹಾಸನದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಮತ್ತೆ ಹಿಡಿತ ಸಾಧಿಸಿದೆ. ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣ ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಜೆಡಿಎಸ್ ನ ಅಭ್ಯರ್ಥಿ ಡಾ.ಸೂರಜ್ ರೇವಣ್ಣ ಅವರು 2,242 ಮತಗಳನ್ನು ಪಡೆದಿದ್ದು, ಕಾಂಗ್ರೆಸ್ ನ ಅಭ್ಯರ್ಥಿ ಎಂ ಶಂಕರ್ 731 ಮತಗಳನ್ನು ಪಡೆದರೇ, ಬಿಜೆಪಿಯ ಹೆಚ್ ಎಂ ವಿಶ್ವನಾಥ್ ಅವರು 354 ಮತಗಳನ್ನು ಗಳಿಸಿದ್ದಾರೆ. ಒಂದು ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಭರ್ಜರಿ ಗೆಲುವನ್ನು ಸಾಧಿಸಿದ್ದಾರೆ. ಈ ಮೂಲಕ ಮೊದಲ ಅಗ್ನಿಪರೀಕ್ಷೆಯಲ್ಲೇ ಸೂರಜ್ ರೇವಣ್ಣಗೆ ಅದೃಷ್ಟ ಖುಲಾಯಿಸಿದ್ದು, ವಿಜಯದ ಸರಮಾಲೆ ಧರಿಸಿದ್ದಾರೆ. … : , 14, 2021 (..): 25 , . .. . 1,000 . 2242 , . 731 , ’ .. 354 .: / / / : - - - -