ರಾಜ್ಯದ ಹಿತಾಸಕ್ತಿಗೆ ಸೌಹಾರ್ದಯುತವಾಗಿ ದನಿ ಎತ್ತುವುದು ಅಗತ್ಯ: ಸಂಸದರ ಸಭೆಯಲ್ಲಿ ಚರ್ಚೆ ವಿಷಯಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಹಿತಿ ನವದೆಹಲಿ,ಜೂನ್,28,2024 (..):ರಾಜ್ಯದ ಹಿತಾಸಕ್ತಿಗೆ ಸೌಹಾರ್ದಯುತವಾಗಿ ದನಿ ಎತ್ತುವುದು ಅಗತ್ಯವಿದೆ. ಕೇಂದ್ರ ಸರ್ಕಾರದಲ್ಲಿ ಅನುಮೋದನೆಗೆ ಬಾಕಿ ಇರುವ ಪ್ರಸ್ತಾವನೆಗಳು ಹಾಗೂ ರಾಜ್ಯದ ಹಿತದೃಷ್ಟಿಯಿಂದ ಆಗಬೇಕಾಗಿರುವ ಕೆಲಸಗಳ ಕುರಿತು ರಾಜ್ಯದ ಸಂಸದರ ಸಭೆ ನಡೆಸಿ ಚರ್ಚಿಸಲಾಯಿತು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ದೆಹಲಿಯ ಕರ್ನಾಟಕ‌ಭವನದಲ್ಲಿ ಪತ್ರಿಕಾಗೋಷ್ಠಿಯ ನಡೆಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ರಾಜ್ಯವನ್ನು ಪ್ರತಿನಿಧಿಸುವ ಸಂಸದರು ಹಾಗೂ ಕೇಂದ್ರ ಸಚಿವರೊಂದಿಗೆ ಕೇಂದ್ರ ಸರ್ಕಾರದಲ್ಲಿ ಅನುಮೋದನೆಗೆ ಬಾಕಿ ಇರುವ ಪ್ರಸ್ತಾವನೆಗಳು ಹಾಗೂ ರಾಜ್ಯದ ಹಿತದೃಷ್ಟಿಯಿಂದ ಆಗಬೇಕಾಗಿರುವ ಕೆಲಸಗಳ ಕುರಿತು ಸಭೆ ನಡೆಸಿ ಚರ್ಚಿಸಲಾಯಿತು. ಸಭೆಯಲ್ಲಿ ನಮ್ಮ ರಾಜ್ಯದಿಂದ ಆಯ್ಕೆಯಾಗಿರುವ ಕೇಂದ್ರದ ಸಚಿವರುಗಳು ಲೋಕಸಭೆ ಮತ್ತು ರಾಜ್ಯಸಭಾ ಸದಸ್ಯರು, ನನ್ನ ಸಚಿವ ಸಂಪುಟದ ಸಹೋದ್ಯೋಗಿಗಳು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ರಾಜಕೀಯ ಉದ್ದೇಶವಿಲ್ಲದ, ಅದಕ್ಕೂ ಮೀರಿ ನಮ್ಮ ರಾಜ್ಯದ ಹಿತಾಸಕ್ತಿ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸಚಿವರು ಹಾಗೂ ಸಂಸದರು ಸದನದ ಒಳಗೆ ಹಾಗೂ ಹೊರಗೆ ಒಕ್ಕೊರಲಿನಿಂದ ಸೌಹಾರ್ದಯುತವಾಗಿ ದನಿ ಎತ್ತುವ ಅಗತ್ಯವನ್ನು ಹೇಳಿದ್ದೇವೆ. ನಾವು ಬೇರೆ ಬೇರೆ ರಾಜಕೀಯ ಪಕ್ಷಗಳನ್ನು ಪ್ರತಿನಿಧಿಸುತ್ತಿರಬಹುದು. ಆದರೆ ಕರ್ನಾಟಕದ ಹಿತಾಸಕ್ತಿಯ ವಿಷಯ ಬಂದಾಗ ನಾವೆಲ್ಲರೂ ಒಂದೇ ವೇದಿಕೆಯವರು. ಈ ವಿಷಯದಲ್ಲಿ ನಮ್ಮ ಹಿಂದಿನವರೂ ಸಹ ಮಾದರಿಗಳಾಗಿದ್ದಾರೆ ಎಂದರು. ನೆಲ, ಜಲ, ಸಂಪನ್ಮೂಲ, ಭಾಷೆ, ಸಂಸ್ಕೃತಿ, ಐಡೆಂಟಿಟಿ ಇತ್ಯಾದಿ ವಿಚಾರಗಳಿಗೆ ಬಂದಾಗ ನಮಗೆ ಪಕ್ಷಗಳಿಲ್ಲ. ಕರ್ನಾಟಕ ಹಿತಾಸಕ್ತಿಯ ರಕ್ಷಣೆ ನಮ್ಮ ಆದ್ಯತೆ. ಕರ್ನಾಟಕ ರಾಜ್ಯದ ಹಿತದೃಷ್ಟಿಯಿಂದ ಆಗಬೇಕಾದ ಕೆಲಸಗಳು, ಕೇಂದ್ರದಲ್ಲಿ ಅನುಮೋದನೆಗೆ ಬಾಕಿ ಇರುವ ಪ್ರಸ್ತಾವನೆಗಳಿಗೆ ಅನುಮೋದನೆ ದೊರಕಿಸಿಕೊಡುವುದು ಹಾಗೂ ಕೆಲವು ಗಳ ಕುರಿತು ಅವರೊಂದಿಗೆ ಚರ್ಚಿಸಲಾಯಿತು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಸಂಸದರು ಸಚಿವರ ಸಭೆಯಲ್ಲಿ ಚರ್ಚಿಸಿದ ಪ್ರಮುಖ ವಿಷಯಗಳು ಈ ಕೆಳಕಂಡಂತಿವೆ 17.ಇದೇ ರೀತಿ 207 ಸಬ್-ರಿಜಿಸ್ಟ್ರಾರ್ ಕಛೇರಿಗಳನ್ನು ಗಣಕೀಕರಣಗೊಳಿಸಲು, ಡಿಜಿಟಲ್ ಇಂಡಿಯಾ ಮಾಡ್ರನೈಸೇಷನ್ ಕಾರ್ಯಕ್ರಮದಡಿಯಲ್ಲಿ ರೂ.365 ಕೋಟಿಗಳ ಅನುದಾನದ ಪ್ರಸ್ತಾವನೆಯನ್ನು ದಿನಾಂಕ:07.06.2024 ರಂದು ಕಳುಹಿಸಲಾಗಿದೆ. ಇದರಿಂದ ಕಂದಾಯ ಇಲಾಖೆಯ ಮೂಲಕ ಉತ್ತಮ ಹಾಗೂ ನುರಿತ ಆಡಳಿತವನ್ನು ನೀಡಲು ಸಾಧ್ಯವಾಗುವುದು. ಈ ಪ್ರಸ್ತಾವನೆಯು ಸಹ ಭೂಸಂಪನ್ಮೂಲ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿದೆ. ಇವುಗಳು ತುರ್ತಾಗಿ ಅನುಮೋದನೆಯಾಗುವಂತೆ ನೋಡಿಕೊಳ್ಳುವುದು. 18.ಯುವಜನ ಸಬಲೀಕರಣ ಇಲಾಖೆಯಡಿಯಲ್ಲಿನ ಖೇಲೊ ಇಂಡಿಯಾ ಕಾರ್ಯಕ್ರಮಗಳಡಿಯಲ್ಲಿ ಒಟ್ಟು 16 ವಿವಿಧ ಕಾರ್ಯಕ್ರಮಗಳ ಪ್ರಸ್ತಾವನೆಗಳು ಅನುಮೋದನೆಗಾಗಿ ಕಳೆದ ವರ್ಷದ ನವೆಂಬರ್ ತಿಂಗಳಿನಿಂದ ಕೇಂದ್ರ ಸರ್ಕಾರದಲ್ಲಿ ಬಾಕಿ ಇವೆ. ಖೇಲೊ ಇಂಡಿಯಾ ಯೋಜನೆ [ ಅಕ್ಟೋಬರ್-2017 ] ಪ್ರಾರಂಭವಾದಾಗಿದ ಅತ್ಯಂತ ಕಡಿಮೆ ಅನುದಾನ ಪಡೆದ ರಾಜ್ಯ ಕರ್ನಾಟಕವಾಗಿದೆ. ಕರ್ನಾಟಕವು ಅನೇಕ ಹೆಸರಾಂತ ಕ್ರೀಡಾಪಟುಗಳನ್ನು ದೇಶಕ್ಕೆ ಕೊಡುಗೆಯಾಗಿ ಕೊಟ್ಟಿದೆ. ಆದ್ದರಿಂದ ಕೇಂದ್ರ ಸರ್ಕಾರದ ಮುಂದೆ ಬಾಕಿ ಇರುವ ಈ 16 ಕಾರ್ಯಕ್ರಮಗಳು ಅನುಮೋದನೆಯಾಗುವಂತೆ ನೋಡಿಕೊಳ್ಳಬೇಕು. 19.ಕೇಂದ್ರದ ಆಹಾರ ಮತ್ತು ನಾಗರೀಕ ಸರಬರಾಜು ಮಂತ್ರಾಲಯ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ () ಅಡಿಯಲ್ಲಿ ಒಟ್ಟು ರೂ.584 ಕೋಟಿ ಅನುದಾನ ಬಿಡುಗಡೆಯಾಗಬೇಕಾಗಿದೆ ಹಾಗೂ ರಾಜ್ಯ ಸರ್ಕಾರಕ್ಕೆ 2.17 ಲಕ್ಷ ಮೆಟ್ರಿಕ್ ಟನ್ ಲಭ್ಯವಿದ್ದು, ಪ್ರಸ್ತುತ 30,000 ಮೆಟ್ರಿಕ್ ಟನ್ಗಳನ್ನು ಹೆಚ್ಚುವರಿಯಾಗಿ ನೀಡಲು ಕೋರಲಾಗಿದೆ. 20.ಬುಡಕಟ್ಟು ವ್ಯವಹಾರಗಳ ಸಚಿವಾಲಯದಲ್ಲಿ ನೈಜ ದುರ್ಬಲ ಬುಡಕಟ್ಟು ಸಮುದಾಯಗಳ ಜನರಿಗೆ ಮನೆ ಕೊಡುವ ಪ್ರಸ್ತಾವನೆಯು ದಿನಾಂಕ:23.3.2023 ರಿಂದ ಬಾಕಿಯಾಗಿರುತ್ತದೆ. ಇವುಗಳನ್ನು ಶೀಘ್ರವಾಗಿ ಬಗೆಹರಿಸಿಕೊಡುವುದು. ಇದೇ ಸಚಿವಾಲಯದಲ್ಲಿ ಹೊಸ ಪೋಸ್ಟ್ ಮೆಟ್ರಿಕ್ ಬಾಲಕಿಯರ ಮತ್ತು ಬಾಲಕರ ವಸತಿ ನಿಲಯಗಳಿಗೆ ಅನುಮೋದನೆ ನೀಡುವಂತೆ ಕೋರಿ ಪ್ರಸ್ತಾವನೆಯನ್ನು ದಿನಾಂಕ:06-06-2023 ರಂದು ಕಳಿಸಲಾಗಿದೆ. 21.ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ವ್ಯಾಪ್ತಿಯಲ್ಲಿ ವಸತಿ, ವಸತಿ ನಿಲಯ ಮುಂತಾದ 5 ಪ್ರಸ್ತಾವನೆಗಳು 2023 ರ ಜೂನ್ ತಿಂಗಳಿAದ ಬಾಕಿಯಾಗಿವೆ. 22.ಅಲ್ಪ ಸಂಖ್ಯಾತ ವ್ಯವಹಾರಗಳ ಸಚಿವಾಲಯಕ್ಕೆ 52 ಯೋಜನೆಗಳನ್ನು ಸಲ್ಲಿಸಲಾಗಿತ್ತು. ಇವುಗಳ ಒಟ್ಟು ಮೊತ್ತ 659 ಕೋಟಿ ರೂ.ಗಳಷ್ಟಾಗಿರುತ್ತದೆ. 32 ವಸತಿ ಶಾಲೆಗಳು, 11 ವಸತಿ ನಿಲಯಗಳು, 4 ಡೇ ಸ್ಕೂಲ್‌ಗಳು, 4 ಕೌಶಲ್ಯ ಕೇಂದ್ರಗಳು ಸೇರಿವೆ. ಇವುಗಳಲ್ಲಿ 12 ಯೋಜನೆಗಳು ಅನುಮೋದನೆಯಾಗಿವೆ. ಆದರೆ ಹಣ ಬಿಡುಗಡೆಯಾಗಿಲ್ಲ. ಉಳಿದ 40 ಯೋಜನೆಗಳು ಬಾಕಿ ಉಳಿದಿವೆ. 23. ಅಡಿಯಲ್ಲಿ ಕೇಂದ್ರ ಸರ್ಕಾರಕ್ಕೆ ಮರುಪಾವತಿಗೆ ಕಳುಹಿಸಿರುವ ದಾಖಲೆಗಳ ಮೊತ್ತವು ರೂ.1,027.82 ಕೋಟಿಗಳಾಗಿರುತ್ತದೆ. ಅದನ್ನು ಬಿಡುಗಡೆ ಮಾಡಲು ಕೋರಲಾಗಿದೆ. 24.ಮೀನುಗಾರಿಕೆಗೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯ ಮಾಜಳಿಯಲ್ಲಿ ಹೊಸದಾಗಿ ಮೀನುಗಾರಿಕಾ ಬಂದರನ್ನು ನಿರ್ಮಿಸುವುದು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ನಿರ್ಮಿಸಿರುವ ಮೀನುಗಾರಿಕಾ ಬಂದರನ್ನು ವಿಸ್ತರಿಸುವ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. 2023 ರಿಂದ ಈ ವಿಷಯ ಬಾಕಿಯಾಗಿದೆ. 25.15ನೆ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಭರಿಸಲಾಗದ ನಷ್ಟವುಂಟಾಗಿದೆ. ಮೊದಲಿನ ಹಣಕಾಸು ಆಯೋಗಗಳು 1971 ರ ಜನಗಣತಿ ವರದಿಯನ್ನು ಆಧರಿಸಿ ಸಂಪನ್ಮೂಲಗಳನ್ನು ಹಂಚಿಕೆ ಮಾಡುತ್ತಿದ್ದವು. ಆದರೆ 15 ನೆ ಹಣಕಾಸು ಆಯೋಗವು 2011 ರ ಜನಗಣತಿಯನ್ನು ಆಧರಿಸಿ ಸಂಪನ್ಮೂಲಗಳನ್ನು ಹಂಚಿಕೆ ಮಾಡಿದೆ. ಜನಸಂಖ್ಯಾ ನಿಯಂತ್ರಣವನ್ನು ಸಾಧಿಸಿ ದೇಶದ ಅಭಿವೃದ್ಧಿಗೆ ಶ್ರಮಿಸಿದ ಕಾರಣದಿಂದಾಗಿಯೆ ನಮ್ಮ ರಾಜ್ಯಕ್ಕೆ ಸಮಸ್ಯೆಯಾಗಿದೆ. ಈ ಕಾರಣದಿಂದ ನಮಗೆ 2017-18 ನೆ ಸಾಲಿನ ಬಜೆಟ್‌ಗೆ ಹೋಲಿಸಿದರೆ ಬೃಹತ್ ಪ್ರಮಾಣದಲ್ಲಿ [ಅರ್ಧಕ್ಕರ್ಧ] ತೆರಿಗೆ ಹಂಚಿಕೆ ಹಾಗೂ ಇನ್ನಿತರೆ ಸಂಪನ್ಮೂಲಗಳ ಹಂಚಿಕೆಯು ಕಡಿಮೆಯಾಗಿದೆ. ಈಗ 16 ಹಣಕಾಸು ಆಯೋಗವು ರಚನೆಯಾಗಿದೆ. 16 ನೆ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಯಾವುದೇ ಅನ್ಯಾಯವಾಗದಂತೆ ತಾವುಗಳು ನೋಡಿಕೊಳ್ಳಬೇಕೆಂದು ಮನವಿ ಮಾಡುತ್ತೇವೆ. : , , , , ,