ಪ್ರಧಾನಿ ಮೋದಿ ಟ್ವಿಟ್ಟರ್ ಖಾತೆ ಹ್ಯಾಕ್ ಮಾಡಿ ಬಿಟ್ ಕಾಯಿನ್ ಪ್ರಚಾರ ಮಾಡಿದ ಹ್ಯಾಕರ್ಸ್ ! ಬೆಂಗಳೂರು, ಡಿಸೆಂಬರ್ 12, 2021 (..):ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ಟ್ವಿಟರ್​ ಖಾತೆಯನ್ನು ಭಾನುವಾರ (ಡಿ. 12) ನಸುಕಿನ ಜಾವ ಕೆಲವೊತ್ತು ಹ್ಯಾಕ್​ ಮಾಡಲಾಗಿದೆ. ಪ್ರಧಾನಿ ಖಾತೆಯನ್ನು ಹ್ಯಾಕ್​ ಮಾಡಿ ಬಿಟ್​ಕಾಯಿನ್​ ಬಗ್ಗೆ ಪ್ರಚಾರ ಮಾಡಿದ್ದು, ಅದಕ್ಕೆ ಸಂಬಂಧಿಸಿದ ಟ್ವೀಟ್​ ಅನ್ನು ಡಿಲೀಟ್​ ಮಾಡಲಾಗಿದೆ. ಪ್ರಧಾನಿ ಅವರ ಟ್ವಿಟರ್​ ಖಾತೆ ಅಲ್ಪಾವಧಿವರೆಗೆ ಹ್ಯಾಕ್​ ಆಗಿತ್ತು. ತಕ್ಷಣ ಟ್ವಿಟರ್​ ಖಾತೆಯನ್ನು ಭದ್ರಪಡಿಸಲಾಗಿದೆ. ಹ್ಯಾಕ್​ ಮಾಡಿದ ಕ್ಷಣದಲ್ಲಿ ಮಾಡಲಾದ ಯಾವುದೇ ಟ್ವೀಟ್​ಗಳನ್ನು ನಿರ್ಲಕ್ಷಿಸಿ ಎಂದು ಪ್ರಧಾನಿ ಕಾರ್ಯಾಲಯ ಹೇಳಿದೆ. ಟ್ವಿಟರ್​ ಸಂಸ್ಥೆಯೊಂದಿಗೆ ಮಾತನಾಡಿ ಪ್ರಧಾನಿ ಕಾರ್ಯಾಲಯ ಸಮಸ್ಯೆ ಬಗೆಹರಿಸಿದೆ. ಭಾರತವು ಲೀಗಲ್​ ಟೆಂಡರ್​ ಆಗಿ ಬಿಟ್​ಕಾಯಿನ್​ ಅನ್ನು ಸ್ವೀಕರಿಸಲಾಗಿದೆ. ಸರ್ಕಾರವು ಅಧಿಕೃತವಾಗಿ 500 ಬಿಟ್​ಕಾಯಿನ್​ ತೆಗೆದುಕೊಂಡಿದ್ದು, ದೇಶದ ಎಲ್ಲ ನಿವಾಸಿಗಳಿಗೆ ಅವುಗಳನ್ನು ವಿತರಿಸುತ್ತದೆ ಎಂದು ಹ್ಯಾಕ್ ಆಗಿದ್ದ ವೇಳೆ ಬರೆಯಲಾಗಿದೆ.