ಗುಡ್ ನ್ಯೂಸ್: ಶೀಘ್ರದಲ್ಲೇ ಅಡುಗೆ ಎಣ್ಣೆ ಬೆಲೆ ಮತ್ತಷ್ಟು ಇಳಿಕೆ ಸಾಧ್ಯತೆ ಬೆಂಗಳೂರು, ಡಿಸೆಂಬರ್ 12, 12, 2021 (..):ಶೀಘ್ರದಲ್ಲೇ ಅಡುಗೆ ಎಣ್ಣೆ ಬೆಲೆ ಮತ್ತಷ್ಟು ಇಳಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ. ಕಡಿಮೆ ಆಮದು ಸುಂಕ ಹಿನ್ನೆಲೆ ಕಳೆದ ತಿಂಗಳಿನಲ್ಲಿ ಖಾದ್ಯ ತೈಲ ಬೆಲೆಗಳು ಪ್ರತಿಕೆಜಿಗೆ 8-10 ರೂ ನಷ್ಟು ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಅಡುಗೆ ಎಣ್ಣೆ ಬೆಲೆ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಮುಂದಿನ ತಿಂಗಳಿನಲ್ಲಿ ಹೆಚ್ಚು ಕಡಿಮೆ 3 ರಿಂದ 4 ರೂ ನಷ್ಟು ಇಳಿಬಹುದು. ಕಳೆದ ಕೆಲವು ತಿಂಗಳಿನಲ್ಲಿ ತಾಳೆ, ಸೋಯಾ ಮತ್ತು ಸೂರ್ಯಕಾಂತಿ ಸೇರಿ ಎಲ್ಲಾ ಖಾದ್ಯ ತೈಲಗಳ ಬೆಲೆ ಏರಿಕೆಯಾಗಿತ್ತು. ಕಡಿಮೆ ಆಮದು ಸುಂಕ ಹಿನ್ನೆಲೆ ಕಳೆದ ತಿಂಗಳಿನಲ್ಲಿ ಖಾದ್ಯ ತೈಲ ಬೆಲೆಗಳು ಪ್ರತಿಕೆಜಿಗೆ 8-10 ರೂ ನಷ್ಟು ಕಡಿಮೆಯಾಗಿತ್ತು.