ಪೂಜೆ ನೆಪದಲ್ಲಿ ಅಮಾನವೀಯ ಕೃತ್ಯ: ಮಹಿಳೆ ಸಾವು. ಹಾಸನ,ಡಿಸೆಂಬರ್,11,2021(..):ಪೂಜೆ ನೆಪದಲ್ಲಿ ಮಹಿಳೆಗೆ ಪೂಜಾರಿ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಮಹಿಳೆ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಹಾಸನ ಜಿಲ್ಲೆಯ ಬೆಕ್ಕಗ್ರಾಮದಲ್ಲಿ ಈ ಘಟನೆ ನಡೆದಿದೆ. ಗೌಡಗೆರೆ ಗ್ರಾಮದ ಪಾರ್ವತಿ ಮೃತಮಹಿಳೆ. ಕೆಲದಿನಗಳಿಂದ ಮಹಿಳೆ ಪಾರ್ವತಿ ತಲೆ ನೋವಿನಿಂದ ಬಳಲುತ್ತಿದ್ದರು. ಆಸ್ಪತ್ರೆಗೆ ಹೋದರೂ ಗುಣಮಖವಾಗಲ್ಲ ಎಂದು ದೇವರ ಮೊರೆ ಹೋಗಿದ್ದರು. ಈ ನಡುವೆ ಪೂಜಾರಿ ಮಧು ಎಂಬಾತ ಪೂಜೆ ಮಾಡಿ ಗುಣಪಡಿಸುವುದಾಗಿ ಹೇಳಿದ್ಧ. ಈ ಮಧ್ಯೆ ನಿಂಬೆ ರಸ ಕುಡಿಸಿ ಗುಣಮುಖಳಾಗುತ್ತಾಳೆ ಎಂದಿದ್ದ ಮಧು ಪೂಜೆ ನೆಪದಲ್ಲಿ ಮಹಿಳೆ ಪಾರ್ವತಿಗೆ ಬೆತ್ತದಿಂದ ಹಲ್ಲೆ ನಡೆಸಿದ್ದು, ಗಾಯಗೊಂಡ ಪಾರ್ವತಿ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಪಾರ್ವತಿ ಮೃತಪಟ್ಟಿದ್ದಾರೆ. ಈ ಸಂಬಂಧ ಡಿಸೆಂಬರ್ 9 ರಂದು ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇಸ್ ದಾಖಲಾಗುತ್ತಿದ್ದಂತೆ ಆರೋಪಿ ಪೂಜಾರಿ ಮಧು ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ. : -- - -