ದಕ್ಷಿಣ ವಲಯ ಅಂತರ ವಿಶ್ವವಿದ್ಯಾನಿಲಯ ಮಹಿಳಾ ಷಟಲ್ ಬ್ಯಾಡ್ಮಿಂಟನ್ ಟೂರ್ನಿ: ಮೈವಿವಿ ತಂಡದ ಆಯ್ಕೆ ಮೈಸೂರು, ಡಿಸೆಂಬರ್ 11, 2021 (..):ಆಂಧ್ರಪ್ರದೇಶದ ಕರ್ನೂಲಿನ ರಾಯಲಸೀಮಾ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ 2021-22 ನೇ ಸಾಲಿನ ದಕ್ಷಿಣ ವಲಯ ಅಂತರ ವಿಶ್ವವಿದ್ಯಾನಿಲಯ ಮಹಿಳಾ ಷಟಲ್ ಬ್ಯಾಡ್ಮಿಂಟನ್ ಟೂರ್ನಿಗೆ ಮೈಸೂರು ವಿವಿ ತಂಡವನ್ನು ಆಯ್ಕೆ ಮಾಡಲಾಗಿದೆ. ಡಿ.14 ರಿಂದ 18ರವರೆಗೆ ಟೂರ್ನಿ ನಡೆಯಲಿದೆ. ವಿವಿಯ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಸ್ಪೋಟ್ಸ್ ಪೆವಿಲಿಯನ್ ಮೈದಾನದಲ್ಲಿ ಇತ್ತೀಚೆಗೆ ತಂಡದ ಆಯ್ಕೆ ಪ್ರಕ್ರಿಯೆ ನಡೆದ್ದು, ನಿಶಾ ಜಿ.ಜಮ್ಮನಕಟ್ಟೆ (ನಾಯಕಿ), ಕೆ.ವಿ.ಮನಸ್ವಿನಿ, ಎಂ.ಸಂಸ್ಕೃತಿ, ಕೆ.ವರ್ಷಿಣಿ ಸೋಮಣ್ಣ ಅವರು ಉತ್ತಮವಾಗಿ ಷಟಲ್ ಬ್ಯಾಡ್ಮಿಂಟನ್ ಆಡುವುದರ ಜತೆಗೆ ತಮ್ಮ ದೈಹಿಕ ಸಾಮರ್ಥ್ಯವನ್ನು ಸಾಧರ ಪಡಿಸಿ ತಂಡಕ್ಕೆ ಆಯ್ಕೆಯಾಗಿದ್ದಾರೆ. ತರಬೇತುದಾರ ಆರ್. ಕಿರಣ್ ಕುಮಾರ್, ತಂಡದ ವ್ಯವಸ್ಥಾಪಕಿ ಡಾ.ಗಾಯತ್ರಮ್ಮ ಜತೆ ತಮ್ಮ ತಂಡ ರಾಯಲಸೀಮಾ ವಿಶ್ವವಿದ್ಯಾಲಯಕ್ಕೆ ಪ್ರಯಾಣ ಬೆಳೆಸಿದೆ ಎಂದು ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ. ಕೃಷ್ಣಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. …. - ’ , 11, 2021 (..): ’ - ’ 2021-22, , , . 14 18. , , , . (), .. , . , . . . , . , . . , , , .: / - / / ’