ಹುತಾತ್ಮ ಸಿಡಿಎಸ್ ಬಿಪಿನ್ ರಾವತ್ ಗೆ ಗಣ್ಯಾತೀಗಣ್ಯರಿಂದ ಅಂತಿಮ ನಮನ ಸಲ್ಲಿಕೆ. ನವದೆಹಲಿ,ಡಿಸೆಂಬರ್,10,2021(..):ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾದ ಸಿಡಿಎಸ್ ಬಿಪಿನ್ ರಾವತ್ ಹಾಗೂ ಪತ್ನಿ ಮಧುಲಿಕಾ ರಾವತ್ ಅವರಿಗೆ ವಿವಿಐಪಿಗಳು, ಸಂಬಂಧಿಕರು ಸೇರಿ ಗಣ್ಯಾತೀಗಣ್ಯರು ಅಂತಿಮ ನಮನ ಸಲ್ಲಿಸಿದರು. ಬಿಪಿನ್ ರಾವತ್ ಅವರ ಪಾರ್ಥೀವ ಶರೀರವನ್ನ ನಿವಾಸದಿಂದ ದೆಹಲಿಯ ಕಂಟೋನ್ಮೆಂಟ್ ನಲ್ಲಿರುವ ಬ್ರಾರ್ ಸ್ಕ್ವೇರ್ ವರೆಗೆ ಅಂತಿಮಯಾತ್ರೆ ಮೂಲಕ ಮೆರವಣಿಗೆಯಲ್ಲಿ ತರಲಾಯಿತು. ಬ್ರಾರ್ ಸ್ಕ್ವೇರ್ ನಲ್ಲಿ ಸಿಡಿಎಸ್ ಬಿಪಿನ್ ರಾವತ್ ಅವರಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕುಟುಂಬಸ್ಥರು, ವಿವಿಐಪಿಗಳು ಅಂತಿಮ ನಮನ ಸಲ್ಲಿಸಿದರು. ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅಂತ್ಯಕ್ರಿಯೆ ವೇಳೆ ಮೂರು ಸೇನೆಯ ಮುಖ್ಯಸ್ಥರು ಭಾಗಿಯಾಗಲಿದ್ದು. ಅಂತ್ಯಕ್ರಿಯೆ ವೇಳೆ 800 ಸೇನಾ ಸಿಬ್ಬಂದಿ ಪಾಲ್ಗೊಳ್ಳಲಿದ್ದಾರೆ. : - – – -